ಭಾವನಾತ್ಮಕ ಗಣೇಶೋತ್ಸವದ “ಶಾನ್ ಹೆಚ್ಚಿಸಿದ” ಶಾಸಕ ಅಮೃತ ದೇಸಾಯಿ…
1 min readಧಾರವಾಡ: ಗಣೇಶ ಉತ್ಸವದ ಸಮಯದಲ್ಲಿ ಹಲವು ಗೊಂದಲಗಳನ್ನ ಸೃಷ್ಟಿಸಿದ್ದ “ಡಿಜೆ”ಗೆ ತಾರ್ಕಿಕ ಅಂತ್ಯ ಕೊಟ್ಟು, ಕ್ಷೇತ್ರದ ಗಣೇಶ ಸಮಿತಿಗಳಿಗೆ ಶಾಸಕ ಅಮೃತ ದೇಸಾಯಿ ಅವರು ನೆಮ್ಮದಿಯ ಖುಷಿಯನ್ನ ನೀಡಿದ್ದಾರೆ.
ಹೌದು.. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ “ಡಿಜೆ” ಹಚ್ಚುವುದು ನಮ್ಮ ಹಕ್ಕು ಎಂದು ಹೇಳಿದ್ರಲ್ಲದೇ, ಬೇಗನೇ ಅದನ್ನ ಮುಗಿಸಿ ಎಂದು ಹೇಳಿದರು. ಈ ಮೂಲಕ ಸಾವಿರಾರೂ ಯುವ ಸಮೂಹ ಉಲ್ಲಶಿತಗೊಂಡು, ಶಾಸಕರ ಘೋಷಣೆಗೆ ಚಪ್ಪಾಳೆಯ ಮೂಲಕ ಹರ್ಷವ್ಯಕ್ತಪಡಿಸಿದರು.
ಶಾಸಕ ಅಮೃತ ದೇಸಾಯಿ ಅವರ ಹೇಳಿಕೆ ಇಲ್ಲಿದೆ ನೋಡಿ…
ಗಣೇಶ ವಿಸರ್ಜನೆಯ ವೇಳೆಗೆ ಡಿಜೆ ಹಚ್ಚಬೇಕೋ ಬೇಡವೋ ಎಂಬ ಗೊಂದಲಗಳಿಗೆ ಶಾಸಕರು ಬ್ರೇಕ್ ಹಾಕಿದ್ದು, ಡಿಜೆ ಪ್ರೇಮಿಗಳ ಹಾಗೂ ಡಿಜೆ ಮಾಲೀಕರಿಗೆ ಗಣೇಶನ ಆಶೀರ್ವಾದ ಸಿಕ್ಕಷ್ಟೇ ಖುಷಿಯಾಗಿದೆ.