ಶಾಸಕ ಅಬ್ಬಯ್ಯ ಗನ್‌ಮ್ಯಾನ್-ಪಿಎಗೆ ಕೊರೋನಾ ನೆಗೆಟಿವ್: ಕುಟುಂಬದ ಐವರಿಗೆ ಪಾಸಿಟಿವ್ ದೃಢ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯರಿಗೆ ಕೊರೋನಾ ದೃಢವಾದ ಬೆನ್ನಲ್ಲೇ ಶಾಸಕರ ಕುಟುಂಬದ ಐವರು ಕೊರೋನಾ ಸೋಂಕಿಗೆ ಒಳಗಾಗಿರುವುದು ದೃಢವಾಗಿದೆ.
ಶಾಸಕ ಪ್ರಸಾದ ಅಬ್ಬಯ್ಯ ಅವರ ಪತ್ನಿ, ಸಹೋದರ ಮತ್ತು ಸಹೋದರ ಎರಡು ಮಕ್ಕಳು ಹಾಗೂ ಕಾರ ಡ್ರೈವರ್‌ಗೆ ಸೋಂಕು ತಗುಲಿದೆ.
ಇನ್ನುಳಿದಂತೆ ಶಾಸಕರ ಸಂಪರ್ಕಿತ ಗನ್‌ಮ್ಯಾನ, ಪಿಎ ಸೇರಿದಂತೆ ಕುಟುಂಬದ 30ಕ್ಕೂ ಹೆಚ್ಚು ಜನರ ಗಂಟಲು ದ್ರವ ಪರೀಕ್ಷೆಗೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.