NWRTCಯಲ್ಲಿ ಮಹಾತ್ಮಗಾಂಧಿ ಜಯಂತಿ
ಹುಬ್ಬಳ್ಳಿ: ವಾಕರಸಾಸಂಸ್ಥೆ, ಕೇಂದ್ರ ಕಛೇರಿಯಲ್ಲಿ ಇಂದು ಮಹಾತ್ಮ ಗಾಂಧಿಜಿಯವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜೀವನ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಆರ್.ಕಿರಣಗಿ ಗಾಂಧಿಯವರ ಜೀವನ ಕುರಿತು ಮಾತನಾಡಿದರು.
ರಾಜೇಶ ಹುದ್ದಾರ, ಪಿ.ವ್ಯ.ನಾಯಕ,ಪ್ರಸನ್ನ ಕುಮಾರ ಬಾಳಾ ನಾಯಕ, ರಾಜಕುಮಾರ, ಪ್ರಕಾಶ ನಾಯಕ, ಕಂದಗಲ್ಲ್ , ಕುಮಾರ ಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಇತರೆ ಇಲಾಖಾ ಮುಖ್ಯಸ್ಥರು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾವಹಿಸಿದ್ದರು.