ಮಿಠಾಯಿ ತಿಂದವರು ಕ್ವಾರಂಟೈನ್: ಮನೆಯಲ್ಲಿರಬೇಕಾದವ ಓಣಿಯಲ್ಲಿ ಮಿಠಾಯಿ ಹಂಚಿದ್ದ

ಬಳ್ಳಾರಿ: ನಗರದಲ್ಲಿ ಕರೋನಾ ವೈರಸ್ ಪಾಸಿಟಿವ್ ಪ್ರಕರಣದ 14ನೇ ಸೋಂಕಿತನಿಂದ 64 ಜನರಿಗೆ ಮಿಠಾಯಿ ಹಂಚಿದ ಪರಿಣಾಮ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಜಿಲ್ಲೆಯಲ್ಲೇ ಆತಂಕದ ಛಾಯೆ ಹೆಚ್ಚತೊಡಗಿದೆ.
ಬಳ್ಳಾರಿಯ ಕೌಲ್ ಬಜಾರ್ ಏರಿಯಾದಲ್ಲಿ ಸೋಕಿತನಿಂದ ಮಿಠಾಯಿ ಹಂಚಿಕೆಯಾಗಿದ್ದು, P- 657 ಸೋಂಕಿತನ ಟ್ರಾವೆಲ್ ಹಿಸ್ಟರಿಯಲ್ಲಿ ಈ ಸತ್ಯ ಬಯಲಾಗಿದೆ. ಉತ್ತರಖಾಂಡ್ ಪ್ರವಾಸಕ್ಕೆ ಹೋಗಿ ಬಂದ ಬಳಿಕ ಸೋಂಕು ಪತ್ತೆಯಾಗಿತ್ತು. ಪ್ರವಾಸದ ಬಳಿಕ ಮನೆಯಲ್ಲೇ ಕ್ವಾರೆಂಟೆನ್ ಆಗಿರಲು
ಸೂಚನೆ ಇದ್ರೂ ಎರಡು ದಿನ ಓಣಿಯಲ್ಲಿ ಓಡಾಡಿದ್ದ. ಒಬ್ಬನ ಎಡವಟ್ಟಿಗೆ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಿದೆ. ಈತನಿಂದ ಮಿಠಾಯಿ ತಿಂದ 64ಜನರು ಕ್ವಾರೆಂಟೆನ್. ಬಳ್ಳಾರಿ ಮೂಲದ 14 ಜನರು ಉತ್ತರಖಾಂಡ್ ಪ್ರವಾಸಕ್ಕೆ ಹೋಗಿದ್ದರು. ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಮೂಲದ ಐಪಿಎಸ್ ಅಧಿಕಾರಿಯ ಸಹಾಯ ಪಡೆದು ಬಳ್ಳಾರಿಗೆ ಮರಳಿದ್ದರು.