ಕೈ ಮುಗಿತೇನಿ ನಮ್ಮಣ್ಣನ ಹುಡುಕಿಕೊಡಿ- ಆಕೆಯ ನೋವನ್ನ ನೀವೂ ನಿಲ್ಲಿಸಬಹುದು…!

ಹುಬ್ಬಳ್ಳಿ: ಆಕೆ ತನ್ನ ಅಣ್ಣ ಸುಖವಾಗಿ ಇರಲೆಂದು ತನ್ನ ಬಳಿಯೇ ಇರುವಂತೆ ನೋಡಿಕೊಂಡಿದ್ದಳು. ತಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಲೇ, ಸರಿಯಾಗಿರುವ ಕನಸು ಕಂಡಿದ್ದಳು. ಆದರೆ, ಅಣ್ಣ ಯಾರಿಗೂ ಹೇಳದ ಹಾಗೇ ಮನೆಯಿಂದ ಕಾಣೆಯಾಗಿದ್ದಾನೆ. ಅದೇ ಕಾರಣಕ್ಕೀಗ, ತಂಗಿಯಾದವಳು ಹುಡುಕತೊಡಗಿದ್ದಾಳೆ.

ಹೌದು.. ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ತಂಗಿ ಶಾರದಾ ಅಶೋಕ ಟಪಾಲ ತನ್ನ ಅಣ್ಣ ಷಣ್ಮುಖಪ್ಪ ಮಹಾದೇವಪ್ಪ ಗುಡ್ಡಮ್ಮನವರ ಎಂಬಾತನನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾಳೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಕಾಣೆಯಾದವನ ಪೋಟೋ ಪಡೆದು, ಹುಡುಕಾಟ ಆರಂಭಿಸಿದ್ದಾರೆ. ಸಾರ್ವಜನಿಕರು ಈ ಮಹಿಳೆಯ ನೋವಿಗೆ ಆಕೆಯ ಸಹೋದರನ ಹುಡುಕಿಕೊಡುವ ಮೂಲಕ ಸ್ಪಂಧಿಸಬೇಕಾಗಿದೆ.