“ನೀರಲ್ಲಿ ನೀರೆ”- 24 ಗಂಟೆಯಾದರೂ ಸಿಗುತ್ತಿಲ್ಲವಳು: ಕಾರ್ಯಾಚರಣೆ ಹೇಗೆ ನಡೆದಿದೆ ಗೊತ್ತಾ..?- EXCLUSIVE VIDEO
ಹಾವೇರಿ: ಮನೆಯ ಮುದ್ದಿನ ಮಗಳು ತಾಯಿಗೆ ತೊಂದರೆ ಕೊಡುವುದು ಬೇಡವೆಂದು ತಾನೇ ನದಿಗೆ ಹೋಗಿ ಬಟ್ಟೆ ತೊಳೆಯುತ್ತೇನೆ ಎಂದು ಹೋದವಳು ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಬಟ್ಟೆ ತೊಳೆಯಲು ಕುಮದ್ವತಿ ನದಿಗೆ ಹೋಗಿದ್ದ 19 ವರ್ಷದ ಶಶಿಕಲಾ ಮಾಳಗೇರ ಕಾಲು ಬಿದ್ದಿದ್ದಾಳೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದರಿಂದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ಮಾಹಿತಿ ಪಡೆದ ಹಲಗೇರಿ ಠಾಣೆಯ ಪೊಲೀಸರು ಮತ್ತು ಅಗ್ನಿ ಶಾಮಕದ ದಳದ ಸಿಬ್ಬಂದಿ ಕಳೆದ 24ಗಂಟೆಯಿಂದಲೂ ನಿರಂತವಾಗಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನೆವಾಗಿಲ್ಲ.
ಕಳೆದು ಹೋದ ಮಗಳ ಪಾಲಕರ ನೋವು ಹೇಳತೀರದ್ದಾಗಿದ್ದು, ಆಕೆಯನ್ನ ನೆನೆ ನೆನೆದು ಕಣ್ಣೀರಾಗುತ್ತಿದ್ದಾರೆ. ನದಿಗೆ ಅಂಟಿಕೊಂಡ ತಗ್ಗು ಪ್ರದೇಶದಲ್ಲಿ ಶಶಿಕಲಾಗಾಗಿ ಹುಡುಕಾಟ ನಡೆದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನಾಗಿಲ್ಲ.
                      
                      
                      
                      
                      