ಕಾರು ಸಮೇತ ಗಂಡ-ಮಗಳು ಕಾಣೆ: ಹುಬ್ಬಳ್ಳಿಯಲ್ಲಿ ಮಹಿಳೆ ದೂರು

ಹುಬ್ಬಳ್ಳಿ: ಮಗಳಿಗೆ ಬಟ್ಟೆ ತರುವುದಾಗಿ ಇಂಡಿಕಾ ಕಾರಿನಲ್ಲಿ ಹೋದ ತನ್ನ ಪತಿ ಮತ್ತು ಮಗಳು ಕಾಣೆಯಾಗಿದ್ದಾರೆಂದು ಮಹಿಳೆಯೋರ್ವರು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
27 ವಯಸ್ಸಿನ ರಾಕೇಶ ಸೂರ್ಯವಂಶಿ, 1ವರ್ಷ 6ತಿಂಗಳಿನ ಈಶಾ ಕಾಣೆಯಾಗಿದ್ದು, ಇವರಿಬ್ಬರನ್ನೂ ಹುಡುಕಿಕೊಡಿ ಎಂದು ಪೊಲೀಸರಲ್ಲಿ ದೂರು ನೀಡಿ ಮನವಿ ಮಾಡಿಕೊಂಡಿದ್ದಾರೆ.
ತಮ್ಮೊಂದಿಗೆ ಇದ್ದಾಗಲೇ ಇಂಡಿಕಾ ಕಾರು ನಂಬರ ಕೆಎ-27 ಬಿ-1956 ಸಂಖ್ಯೆಯ ಕಾರಿನಲ್ಲಿ ಮಗಳಿಗೆ ಬಟ್ಟೆ ತರಲು ಹೋಗುವುದಾಗಿ ಹೇಳಿ ಹೋದವರೂ ಮರಳಿ ಬಂದೇಯಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಗಳನ್ನ ಕರೆದುಕೊಂಡು ಹೋದರೇ ಬಟ್ಟೆಯ ಅಳತೆ ನೋಡಿ ತರಬಹುದೆಂಬ ಕಲ್ಪನೆಯಿಂದ ತಾವೂ ಸುಮ್ಮನಿದ್ದು, ನಂತರ ಮಗಳಾಗಲಿ ಅಥವಾ ತನ್ನ ಪತಿಯಾಗಲಿ ಮರಳಿ ಬರದೇ ಕಾಣೆಯಾಗಿದ್ದಾರೆಂದು ದೂರು ಸಲ್ಲಿಸಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತಿ ಮತ್ತು ಮಗುವನ್ನ ಪತ್ತೆ ಮಾಡಲು ತನಿಖೆ ಕೈಗೊಂಡಿದ್ದಾರೆ.