ಮಿನಿ ವಿಧಾನಸೌಧದಲ್ಲಿ ಬೆಂಕಿ: ಸರಕಾರಿ ಕಾಗದ ಪತ್ರಗಳು ಭಸ್ಮ- ವೀಡಿಯೋ ಇದೆ
ರಾಯಚೂರು: ವಿದ್ಯುತ್ ಅವಘಡದಿಂದ ಸರಕಾರಿ ಕಚೇರಿಯ ಸಾರ್ವಜನಿಕರ ಕಾಗದಪತ್ರಗಳು ಸುಟ್ಟು ಕರಕಲಾದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಮಿನಿ ವಿಧಾನಸೌಧ ಕೋಣೆ ನಂ 3 ರಲ್ಲಿ ನಡೆದಿದೆ.
ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಶಿರಸ್ತೇದಾರ್ ಹಾಗೂ ಹಲವು ಸಿಬ್ಬಂದಿಗಳಿಗೆ ಸಂಬಂಧಪಟ್ಟ ಕಾಗದಪತ್ರ ಸುಟ್ಟು ಬೂದಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.
ಘಟನಾ ಸ್ಥಳಕ್ಕೆ ತಹಶೀಲ್ದಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರರಿಸ್ಥಿತಿಯನ್ನ ಅವಲೋಕನ ನಡೆಸಿದ್ದು, ಯಾವ ಯಾವ ವಿಭಾಗದ ಕಾಗದ ಪತ್ರಗಳು ಸುಟ್ಟಿರಬಹುದೆಂಬ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.