ಸಚಿವ ಮಾಧುಸ್ವಾಮಿ ರಾಜೀನಾಮೆ

ಬೆಂಗಳೂರು: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಬೇರೆ ಪಕ್ಷದವರನ್ನ ಕರೆದುಕೊಂಡು ಅಧಿಕಾರ ಹಿಡಿದಾಗಿನಿಂದ ಒಂದಿಲ್ಲಾ ಒಂದು ರಗಳೆಗಳು ನಿರಂತರವಾಗಿ ನಡೆಯುತ್ತಿದ್ದು, ಇಂದು ಬೆಳ್ಳಂಬೆಳಿಗ್ಗೆ ಸಚಿವ ಮಾಧುಸ್ವಾಮಿ ರಾಜೀನಾಮೆ ನೀಡಿದ್ದಾರೆ.
ನೂತನ ಸಚಿವರಿಗೆ ಖಾತೆಗಳ ಹಂಚಿಕೆ ನಡೆಯುತ್ತಿದ್ದ ಹಾಗೇ ತಮ್ಮ ಆಪ್ತ ಸಹಾಯಕ ಅರುಣ ಕೈಯಲ್ಲಿ ರಾಜೀನಾಮೆ ಪತ್ರವನ್ನ ನೀಡಿ, ಯಾರಿಗೂ ಸಿಗದ ಸ್ಥಳಕ್ಕೆ ಹೋಗಿದ್ದಾರೆ.
ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದ ಮಾಧುಸ್ವಾಮಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನ ನೀಡಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ, ಇಂದು ನಡೆಯುವ ಕ್ಯಾಬಿನೇಟ್ ಸಭೆಯಲ್ಲೂ ಹಾಜರಾಗಲ್ಲ ಎಂಬುದನ್ನ ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
ಉತ್ತಮ ಸಂಸದೀಯ ಪಟುವಾಗಿದ್ದ ಮಾಧುಸ್ವಾಮಿಯವರಿಗೆ ಉದ್ದೇಶಪೂರ್ವಕವಾಗಿಯೇ ಮೊದಲು ಕಾನೂನು ಮತ್ತು ಸಂಸದೀಯ ಖಾತೆಯನ್ನ ನೀಡಲಾಗಿತ್ತು. ಆದರೆ, ನೂತನ ಸಚಿವರಿಗೆ ಖಾತೆ ಹಂಚಿಕೆ ಸಮಯದಲ್ಲಿ ಅವರ ಖಾತೆಯನ್ನ ಬದಲಾವಣೆ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.