ಸಚಿವ “ಲಾಡ” ಕ್ಷೇತ್ರದಲ್ಲಿ ‘ಘೋರ ದುರಂತ’- ಸ್ಪಾಟಿಗೆ ಡಿಪಾರ್ಟ್‌ಮೆಂಟ್…!!!
1 min readಕಲಘಟಗಿ: ಹೊಟ್ಟೆಪಾಡಿಗಾಗಿ ಬೇರೆಯವರ ಜಮೀನಿಗೆ ಕೂಲಿ ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯದ ಪರಿಣಾಮ ಪ್ರಾಣ ಕಳೆದುಕೊಂಡ ದುರ್ಘಟನೆ ಕಲಘಟಗಿ ಶೆಟ್ಟಿ ಲಂಚ್ ಹೋಂ ಬಳಿಯ ಜಮೀನಿನೊಂದರಲ್ಲಿ ಸಂಭವಿಸಿದೆ.
ಕಲಘಟಗಿಯ 55 ವರ್ಷದ ಮಹಾದೇವಪ್ಪ ಹಂಗರಕಿ ಎಂಬಾತನೇ ಹೊಲದಲ್ಲಿ ಹರಿದು ಬಿದ್ದ ತಂತಿ ತಗುಲಿ ಸಾವಿಗೀಡಾದ ದುರ್ಧೈವಿಯಾಗಿದ್ದಾನೆ. ಮಹಾದೇವಪ್ಪ, ಕಲಘಟಗಿಯ ದಾವಲಸಾಬ ಬೇಪಾರಿ ಎಂಬಾತನ ಜಮೀನಿನಲ್ಲಿ ಕೆಲಸ ಮಾಡುವಾಗ ಘಟನೆ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, ಲೈನ್‌ಮನ್ ಹಾಗೂ ಕೆಇಬಿ ಶಾಖಾಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.