ಸಚಿವ ಉಮೇಶ ಕತ್ತಿಗಿಲ್ಲ ಬೆಳಗಾವಿ ಜಿಲ್ಲಾ ಉಸ್ತುವಾರಿ…!

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಗಳ ಫಲಿತಾಂಶ ಹೊರ ಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿಗಳ ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು, ಸ್ಥಳೀಯರಿಗೆ ಜಿಲ್ಲಾ ಉಸ್ತುವಾರಿಯನ್ನ ನೀಡದೇ ಇರುವುದು ಕಂಡು ಬಂದಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ಕೊಟ್ಟ ನಂತರ, ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣೀಟ್ಟಿದ್ದ ಉಮೇಶ ಕತ್ತಿಯವರಿಗೆ ಬಾಗಲಕೋಟೆ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಕಾರಜೋಳ ಅವರನ್ನ ಬೇರೆ ಬೇರೆ ಜಿಲ್ಲೆಗೆ ಹಾಕುತ್ತಿರುವುದು ಇದು ಮೂರನೇಯ ಸಲವಾಗಿದೆ.
ಇನ್ನುಳಿದಂತೆ ಅರವಿಂದ ಲಿಂಬಾವಳಿಯವರನ್ನ ಬೀದರ, ಮುರುಗೇಶ ನಿರಾಣಿ ಕಲಬುರಗಿ ಹಾಗೂ ಎಸ್.ಅಂಗಾರ ಅವರನ್ನ ಚಿಕ್ಕಮಗಳೂರು ಜಿಲ್ಲೆಗೆ ನೇಮಕ ಮಾಡಲಾಗಿದೆ.