ಶಿಕ್ಷಣ ಸಚಿವರೂ- ಚಕ್ಕಡಿಯೂ- ವಾರ್ತಾ ಇಲಾಖೆಯ ವಾಹನವೂ.. ! ಏನೇಲ್ಲ ನಡೀತು ಗೊತ್ತಾ..?
ಧಾರವಾಡ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶಕುಮಾರವರ ಧಾರವಾಡ ಜಿಲ್ಲೆಯ ಭೇಟಿ ವಿಭಿನ್ನವಾಗಿತ್ತು. ಮಕ್ಕಳ ಶ್ರೇಯೋಭಿವೃದ್ಧಿಯ ಚೆಕ್ ಮಾಡುವ ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಹುರುಪು ಮೂಡಿಸಲು ಸಚಿವರು ಮುಂದಾಗಿದ್ದು, ಹಲವು ಘಟನೆಗಳಿಂದು ನಡೆದವು.
ಸಚಿವರು ಧಾರವಾಡ ತಾಲೂಕಿನ ಬಾಡ ಗ್ರಾಮಕ್ಕೆ ವಿದ್ಯಾಗಮ ಕಾರ್ಯಕ್ರಮ ಪರಿಶೀಲನೆಗೆಂದು ಹೋಗಿದ್ದರು. ಈ ವೇಳೆ ರಸ್ತೆ ಪಕ್ಕ ಕಾರು ನಿಲ್ಲಿಸಲಾಗಿತ್ತು. ಅದೇ ಮಾರ್ಗವಾಗಿ ರೈತನೋರ್ವ ಚಕ್ಕಡಿ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಚಕ್ಕಡಿಯ ಗಾಲಿ ಕಾರಿಗೆ ಉಜ್ಜಿಕೊಂಡು ಹೋಯಿತು. ಇದರಿಂದ ಕಾರಿಗೆ ತುಸು ಸ್ಕ್ರ್ಯಾಚ್ ಆಯಿತು. ಆದರೆ, ಶಿಕ್ಷಣ ಸಚಿವರು ಅದರತ್ತ ಗಮನ ಕೊಡದೇ ಉದಾರತೆಯಿಂದ ಅಲ್ಲಿಂದ ಹೊರಟು ಹೋದರು.
ವಾರ್ತಾ ಇಲಾಖೆ ವಾಹನದಲ್ಲಿ ಸಚಿವ ಸುರೇಶ ಕುಮಾರ್ ಸಂಚಾರ
ಧಾರವಾಡ ಗ್ರಾಮೀಣ ಭಾಗದಲ್ಲಿ ಸಚಿವರ ಸಂಚರಿಸಿದರು. ಹಳ್ಳಿ ಭಾಗದ ವಿವಿಧ ಶಾಲೆಗಳಿಗೆ ಭೇಟಿ ವೇಳೆ ಕಾರ್ ಬಿಟ್ಟು ವಾರ್ತಾ ಇಲಾಖೆ ವಾಹನ ಏರಿದರು. ಬಾಡ, ಸಲಕಿನಕೊಪ್ಪ ಭಾಗದಲ್ಲಿ ಸಚಿವರು ಸಂಚರಿಸುವಾಗ ಹಲವು ವರದಿಗಾರರೊಂದಿಗೆ ಮಾತನಾಡಿ, ಧಾರವಾಡದ ಬಗ್ಗೆ ಮಾಹಿತಿ ಪಡೆದರು.
ಸಚಿವ ಸುರೇಶಕುಮಾರ ಇಂದಿನ ಸಂಚಾರದಲ್ಲಿ ಹಲವು ವೈಶಿಷ್ಟ್ಯತೆಗಳು ಕಂಡು ಬಂದವು. ಎಲ್ಲರೊಂದಿಗೂ ಚೆನ್ನಾಗಿಯೇ ಬೆರೆತು ಮಕ್ಕಳೊಂದಿಗೆ ನಲಿದರು ಕೂಡಾ.