ಚಿಂತೆ ಬೇಡಾ, ವ್ಯವಸ್ಥೆ ಸರಿಯಾಗಿದೆ: ಸಚಿವ ಸುರೇಶಕುಮಾರ
1 min readಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳುತ್ತಿದ್ದು, 10ನೇ ಕ್ಲಾಸ್ನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಹಾಗೂ 6ರಿಂದ 9ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭವಾಗಲಿದೆ. ಈ ಹಿನ್ನೆಲೆ ಪೋಷಕರಿಗೆ ಯಾವುದೇ ಭಯ ಬೇಡ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಸಚಿವರು, ನಾಳೆ ಶಾಲೆ ಕಾಲೇಜು ಆರಂಭಗೊಳ್ಳುತ್ತಿರುವ ಹಿನ್ನಲೆ ನಿನ್ನೆಯಿಂದ ನಗರವನ್ನು ಸುತ್ತುತ್ತಿದ್ದು, ಇವತ್ತು ಜಯನಗರ, ಬಸವನಗುಡಿ ಕಡೆ ಭೇಟಿ ಕೊಡಲಿದ್ದೇನೆ. ನಿನ್ನೆ ಯಲಹಂಕ ಕಡೆ ಭೇಟಿಕೊಟ್ಟಿದ್ದೆ, ನಾಳೆ ಆನೆಕಲ್ ಕಡೆ ಹೋಗಲಿದ್ದೇನೆ. ಸಿದ್ಧತೆ ಹೇಗಿದೆ ಅನ್ನೋದನ್ನ ಗಮನಿಸಲು ಶಾಲೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಸಿಲಬಸ್ ಹೇಗಿದೆ ಅನ್ನೋದರ ಬಗ್ಗೆ ಚರ್ಚೆಸುತ್ತೇನೆ ಎಂದರು. ಈಗಾಗಲೇ ಎಲ್ಲ ಕಡಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿದ್ಯಾರ್ಥಿಗಳಲ್ಲಿ ಶಾಲೆ ಆರಂಭದ ಬಗ್ಗೆ ಸಂತೋಷ ಇದೆ. ಇದರ ಬಗ್ಗೆ ಗಮನ ಹರಿಸುತ್ತಿದ್ದೇನೆ. ಕೆಲವು ಕಾಲೇಜುಗಳಲ್ಲಿ ಬ್ಯಾಂಡ್ ಹಾಗೂ ತೋರಣ ಕಟ್ಟಿ ಆರಂಭಿಸುತ್ತಿದ್ದಾರೆ. ಇದೆಲ್ಲಾ ಸಂಸ್ಥೆಗಳು ಯಾವ ರೀತಿ ಸಜ್ಜಾಗಿವೆ ಅನ್ನೋದಕ್ಕಿರುವ ಸಾಕ್ಷಿ ಎಂದು ಸಚಿವರು ತಿಳಿಸಿದರು. ನಾಳೆ ಶಾಲೆ-ಕಾಲೇಜು ಆರಂಭವಾದ ಬೆನ್ನಲ್ಲೇ, ಮೊದಲ ಪಿರಡ್ನಲ್ಲಿ ಪಾಠ ಮಾಡಬೇಡಿ ಅಂತ ಶಿಕ್ಷಕರಿಗೆ ಹೇಳಿದ್ದೇನೆ. ಮಕ್ಕಳ ಭಾವನೆ ಬಗ್ಗೆ ಕೇಳಿ, ಅವರ ಅನುಭವ ಹೇಗಿದೆ ಈ ಕೋವಿಡ್ ಸಮಯದಲ್ಲಿ ಅನ್ನೋದರ ಬಗ್ಗೆ ಕೇಳಿ ಅಂತ ಸೂಚಿಸಿದ್ದೇನೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸ್ಲೇ ಬೇಕು ಅನ್ನೋ ಒತ್ತಾಯ ಇಲ್ಲ. ತಮ್ಮ ಚಾರಕ್ಕೆ ಬಿಟ್ಟಿದ್ದು ಎಂದರು.
ಇದೇ ವೇಳೆ ಬ್ರಿಟನ್ ವೈರಸ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಯಾವ ಪೋಷಕರಿಗೂ, ಯಾರಿಗೂ ಭಯ ಬೇಡ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.