224 ಶಾಸಕರ “ಏಕಪತ್ನಿ ವ್ರತಸ್ಥ”- ಪ್ರಶ್ನೆ ಎತ್ತಿದ ಸಚಿವ ಸುಧಾಕರ…!

ಬೆಂಗಳೂರು: ಕಳೆದ ಮೂರು ದಿನದಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ವಿಚಾರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ವೈಧ್ಯಕೀಯ ಸಚಿವರ ಆರ್.ಸುಧಾಕರ, ಕರ್ನಾಟಕ ರಾಜ್ಯದ 224 ಶಾಸಕರ ಏಕಪತ್ನಿವ್ರತಸ್ಥರಾ.. ಎಂದು ಪ್ರಶ್ನಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಸಚಿವ ಸುಧಾಕರ ಅವರು, ರಾಜ್ಯದಲ್ಲಿ 224 ಶಾಸಕರು ಸತ್ಯ ಹರಿಶ್ಚಂದ್ರರಾ.. ಎಲ್ಲ ಶಾಸಕರು ಏಕಪತ್ನಿವ್ರತಸ್ಥಾರಾ ಎಂದು ಪ್ರಶ್ನಿಸಿದ್ದಾರೆ. ಯಾರಿಗೆ ಸಂಬಂಧಗಳು ಇವೆ. ಮದುವೆಯಾದ ನಂತರದ ಸಂಬಂಧಗಳಿವೆ ಎಂದು ತನಿಖೆಯಾಗಲಿ ಎಂದಿದ್ದಾರೆ. ಇದರಿಂದ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.
ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಹುಚ್ಚರ ಸಂತೆಯಾಗತ್ತೆ. ಹಾಗೇ ಹೇಳುವುದು ಸರಿಯಲ್ಲ. ಹಾಗೇ ವಿಚಾರ ಮಾಡೋಕೆ ಆಗತ್ತಾ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ ನೀಡಿದ್ದು, ಸಚಿವ ಸುಧಾಕರ ರಾಜ್ಯದ ಜನರಿಗೆ ತಮ್ಮ ನುಡಿಮುತ್ತುಗಳನ್ನ ಹೇಳಿದ್ದಾರೆ. ನನಗೆ ಮಾತ್ರ ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದರು.
ಎಚ್.ಡಿ.ರೇವಣ್ಣ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತನಿಖೆಯನ್ನ ಮಾಡಲಿ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರಕಾರವಿದೆ. ಅವರೇ ತನಿಖೆ ಮಾಡಿ ಹೊರಗೆ ಹಾಕಲಿ ಎಂದು ಹೇಳಿದ್ದಾರೆ.