ವರ್ಗಾವಣೆ-ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವ ಧಾರವಾಡದಲ್ಲಿ ಮಾತಾಡಿದ್ದೇನು..!?
1 min readಧಾರವಾಡ: ಮೇ ಮತ್ತು ಜೂನ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯ ಸಿದ್ದತೆಯ ಪರಿಶೀಲನೆ ಸಭೆ ಮಾಡಲಾಗಿದೆ. ಇಂದು ಬೆಳಗಾವಿ ವಿಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉ.ಕನ್ನಡ, ಶಿರಶಿ, ಜಿಲ್ಲೆಗಳ ಉಪನಿರ್ದೆಶಕರ ಜೊತೆ ಸಭೆ ನಡೆಸಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಧಾರವಾಡದಲ್ಲಿ ಹೇಳಿದರು.
44 ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆಗೆ ಪದವಿ ಪೂರ್ವ ನಿರ್ದೆಶಕರುಗಳ ಜೊತೆ ಸಂವಾದ ನಡೆಸಿದ ನಂತರ ಮಾತನಾಡಿದ ಸಚಿವರು ಹೇಳಿದ್ದಿಷ್ಟು…
ಕಳೆದ ವರ್ಷ ಹತ್ತನೆಯ ಪರೀಕ್ಷೆಗೆ ರಾಜ್ಯದಲ್ಲಿ 8,48,203 ವಿದ್ಯಾರ್ಥಿಗಳು ಹಾಜರಿದ್ದರು. ಈ ವರ್ಷ 8,75,798 ವಿದ್ಯಾರ್ಥಿಗಳು ಸಂಖ್ಯೆ ಹೆಚ್ಚಾಗಿದೆ. ಬೆಳಗಾವಿ ವಿಭಾಗದಲ್ಲಿ 9 ಜಿಲ್ಲೆಗಳಿಂದ 2,42,070 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 787 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದೆ, ಸೂಕ್ಷ್ಮ 5 ಕೇಂದ್ರಗಳನ್ನ ಗುರುತಿಸಲಾಗಿದೆ ಎಂದು ಹೇಳಿದರು.
ಸಂವೇದ ಕಾರ್ಯಕ್ರಮದಡಿಯಲ್ಲಿ 1,93,776 ಮಕ್ಕಳು ಯೂಟೂಬ್ ನಲ್ಲಿ ವೀಕ್ಷಣೆ ಮಾಡಿದ್ದಾರೆ. ಬೆಳಗಾವಿ ವಿಭಾಗದಲ್ಲಿ 787 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದೆ. ಎಲ್ಲ ರಿತಿಯ ಮುನ್ನಚ್ಚರಿಕೆಯ ಕ್ರಮಗಳನ್ನ ಕೈಗೋಳ್ಳುತ್ತೆವೆ ಎಂದರು.
ಮೇ 24 ರಿಂದ ಜೂನ್ 16 ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ 6,72,000 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದಾರೆ. 1 ರಿಂದ 9 ರ ತರಗತಿಯ ಬಗ್ಗೆ ಪರೀಕ್ಷೆಗಳ ಬಗ್ಗೆ ಚರ್ಚೆ ನಡೀತಾಯಿದೆ. ನಾನು ಶಿಕ್ಷಣ ತಜ್ಞರು, ಪೋಷಕರು, ಖಾಸಗಿ ಶಾಲಾ ಸಂಘಟನಾಕಾರು, ವಿಭಾಗದ 44 ಜನರು ಭಾಗಿಯಾಗಿದ್ದರು. ಶೇ 70 ರಷ್ಟು ನಾವು ಫೀಸ್ ಕಟ್ಟಲು ಪೋಷಕರು ರೆಡಿ ಇದಾರೆ. ಸರಕಾರದ 70/30 ರ ಆದೇಶದ ಪ್ರಕಾರ ಯಾವುದೆ ಕ್ರಮ ಕೈಗೊಳ್ಳಬಾರದು. ಶಾಲೆಗಳು ಕೂಡಾ ಪೋಷಕರ ಮೆಲೆ ಒತ್ತಡ ಹೇರಬಾರದು. ಪೀಸ್ ಕಟ್ಟಿಲ್ಲ ಅನ್ನೋ ಮಕ್ಕಳ ಪಲಿತಾಂಶವನ್ನ ತಡೆ ಹಿಡಿಯಬಾರದು ಎಂದು ಹೇಳಿದರು.
ನಾನು ಮತ್ತೆ ಗುರುವಾರ ಮತ್ತೊಂದು ಸಭೆ ನಡೆಸುತ್ತೇನೆ. ಶಿಕ್ಷಕರ ವರ್ಗಾವಣೆ ವಿಚಾರವಾಗಿ, ಇಲಾಖೆಯಲ್ಲಿ ಬದಲಾವಣೆಯನ್ನ ತರುವ ವಿಚಾರ ನಡೆದಿದೆ ಎಂದು ಹೇಳಿದರು.