“ಮಿನಿಸ್ಟರ್” ಜೋಶಿಯವರಿಗೆ ‘ಏರ್ಪೋರ್ಟ್”ನಲ್ಲಿ ಭವ್ಯ ಸ್ವಾಗತ: ಯಾಕೆ ಗೊತ್ತಾ…!?
1 min readಹುಬ್ಬಳ್ಳಿ: ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ ಜೋಶಿಯವರಿಗೆ ಇಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತವನ್ನ ನೀಡಲಾಯಿತು.
ನೂತನವಾಗಿ ಉದ್ಘಾಟನೆಗೊಂಡ ಸಂಸತ್ ಭವನದಲ್ಲಿ ಯಶಸ್ವಿಯಾಗಿ ಲೋಕಸಭೆಯ ವಿಶೇಷ ಅಧಿವೇಶನ ನಡೆದಿದ್ದು, ಮಹಿಳೆಯರಿಗೆ 33% ರಷ್ಟು ರಾಜಕೀಯ ಮೀಸಲಾತಿಯನ್ನು ನೀಡಿದ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿರುವ ಅನೇಕ ಜನಪರ ಮಸೂದೆಗಳು ಅಂಗೀಕಾರಗೊಂಡಿವೆ ಎಂದು ಈ ಭಾಗದ ಸಂಸದರು ಆಗಿರುವ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.
ಈ ವಿಶೇಷ ಅಧಿವೇಶನವು ಯಶಸ್ವಿಯಾಗಿ ಜರುಗಲು ಕಾರಣಿಕರ್ತರಾದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ ಜೋಶಿಯವರು ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಪಕ್ಷದ ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಗಮಿಸಿದ್ದರು.
ಶಾಸಕ ಮಹೇಶ ಟೆಂಗಿನಕಾಯಿ, ಕ್ಷೇತ್ರದ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮಹೇಂದ್ರ ಕೌತಾಳ, ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಪಾಲಿಕೆ ಸದಸ್ಯೆ ರೂಪ ಶೆಟ್ಟಿ, ಅಶೋಕ ವಾಲ್ಮೀಕಿ, ಗೋಪಾಲ ಬದ್ದಿ, ಅಕ್ಕಮ್ಮ ಹೆಗಡೆ, ಸಂಗೀತ ಬದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.