ಸಚಿವ ಸಂತೋಷ ಲಾಡ್ ಹೆಸರು ಕೆಡಿಸಲು ಅಧಿಕಾರಿಗಳೇ ಮುಂದಾಗಿದ್ದಾರಾ…!?

ಕಲಘಟಗಿ: ತಾಲೂಕಿನ ಬಿದರಗಡ್ಡಿಗೆ ಹೋಗುವ ರಸ್ತೆ ನಿರಂತರ ಮಳೆಯಿಂದ ಕೊಚ್ಚಿ ಹೋಗಿ ತಿಂಗಳು ಕಳೆದರೂ, ಉದ್ದೇಶಪೂರ್ವಕವಾಗಿ ಅಧಿಕಾರಿಗಳು ಆ ಕಾಮಗಾರಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗುವುದು ದುಸ್ತರವಾಗಿದೆ. ರೈತಾಪಿ ಜನ ತಮ್ಮ ಜಮೀನುಗಳಿಗೆ ಹೋಗಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಕಂಡು ಕಾಣದಂತೆ ಇರುತ್ತಿದ್ದಾರಂತೆ.
ಈಗಲಾದರೂ, ಪ್ರಾಮಾಣಿಕ ಮತ್ತು ನಂಬಿಕೆಗೆ ಅರ್ಹರಾದ ಸಚಿವ ಸಂತೋಷ ಲಾಡ್ ಅವರ ಹೆಸರು ಕೆಡಿಸಲು ಅಧಿಕಾರಿಗಳು ಹೀಗೆ ಮಾಡುತ್ತಿದ್ದಾರೆಂದು ಹೇಳಲಾಗಿದೆ.