ರಾಜ್ಯದ ಕಬ್ಬು ಬೆಳೆಗಾರರಿಗೆ ಗಿಫ್ಟ್ ನೀಡಿದ ಸಚಿವ ಮುನೇನಕೊಪ್ಪ…

ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರಿಗೆ ಇಡೀ ದೇಶದಲ್ಲಿ ಮಾದರಿಯಾಗುವಂತಹ ಆದೇಶವನ್ನ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೊರಡಿಸುವ ಮೂಲಕ ರೈತ ಸಮುದಾಯಕ್ಕೆ ಬಹುದೊಡ್ಡ ಕೊಡುಗೆಯನ್ನ ನೀಡಿದ್ದಾರೆ.
ಈ ಬಗ್ಗೆ ಸ್ವತಃ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ವಿವರ ನೀಡಿದ್ದು, ಇಲ್ಲಿದೆ ನೋಡಿ…
ಕಬ್ಬಿನ ಉಪ ಉತ್ಪನ್ನಗಳಿಗೆ ಸಿಗುತ್ತಿದ್ದ ಲಾಭದಲ್ಲಿ ರೈತರಿಗೆ ಕೊಡಲು ಆದೇಶ ನೀಡಲಾಗಿದ್ದು, ಇದರಿಂದ 204.47 ಕೋಟಿ ರೂಪಾಯಿ ರೈತರಿಗೆ ಸಂದಾಯವಾಗಲಿದೆ.
ರಾಜ್ಯದಲ್ಲಿ ರೈತರು ನಡೆದುತ್ತಿದ್ದ ಹೋರಾಟವನ್ನ ಗಮನದಲ್ಲಿಟ್ಟುಕೊಂಡು ಮಹತ್ತರ ತೀರ್ಮಾನಕ್ಕೆ ಸರಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.