“ಆ ಕೇಸ್” ಸದನದಲ್ಲೇ ಸುಳ್ಳು ಹೇಳಿದ್ರಾ ಸಚಿವರು…!? ಶಾಸಕ ‘MT’ ಹೇಳಿದ್ದೆ ಸತ್ಯ… ಕಮೀಷನರ್ ಕೂಡಾ ಅದ್ನೇ ಹೇಳಿದ್ರು… Exclusive Videos…

ಹುಬ್ಬಳ್ಳಿ: ಬಾಣಂತಿಯರ ಹಾಗೂ ಅಂಗನವಾಡಿ ಮಕ್ಕಳ ಪೌಷ್ಟಿಕಾಂಶ ಆಹಾರ ಪದಾರ್ಥ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಟ್ವಿಸ್ಟ್‌ಗಳು ಆರಂಭಗೊಂಡಿದ್ದು, ಬಂಧನವಾಗಿದ್ದು ಎಷ್ಟು ಜನ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಈ ಪ್ರಕರಣದ ಕುರಿತು ಸದನದಲ್ಲಿ ಪ್ರಶ್ನಿಸಿದ್ದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಸದನದಲ್ಲಿ ಸಚಿವ ಪ್ರಿಯಾಂಕಾ ಖರ್ಗೆ ಅವರು ತಪ್ಪು ಮಾಹಿತಿ ನೀಡಿದ್ಸಾರೆ ಎಂದು ಟೆಂಗಿನಕಾಯಿ ಅವರು ಮರು ಪ್ರಶ್ನಿಸಿದ್ದರು.
ವೀಡಿಯೋ…
ಬಂಧನವಾಗಿದ್ದು 36 ಜನರಲ್ಲ, 32 ಎಂದು ಹೇಳಿದರೂ ಕೂಡಾ, ಸಚಿವರು 36 ಎಂದೇ ಪ್ರತಿಪಾದಿಸಿದ್ದರು. ಆದರೆ, ಈ ಕುರಿತು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಹೇಳಿಕೆ ನೀಡಿ, ಬಂಧನವಾಗಿದ್ದು 32 ಆರೋಪಿತರು ಎಂದಿದ್ದಾರೆ. ಹೀಗಾಗಿ, ಸತ್ಯ ಹೊರ ಬಂದಂತಾಗಿದೆ.
ಪ್ರಕರಣದ ಕುರಿತು ಸಚಿವರಿಗೂ ತಪ್ಪು ಮಾಹಿತಿಯನ್ನ ನೀಡಲಾಗಿತ್ತಾ ಎಂಬ ಪ್ರಶ್ನೆ ಇದೀಗ ಮೂಡತೊಡಗಿದೆ. ಆದರೆ, ವಿರೋಧ ಪಕ್ಷದಲ್ಲಿರುವ ಶಾಸಕ ಮಹೇಶ ಟೆಂಗಿನಕಾಯಿ ಅವರು ನಿಖರ ಮಾಹಿತಿ ಹೊಂದಿದ್ದರು ಎಂಬುದು ಕೂಡಾ ದೃಢವಾಗಿದೆ.