Posts Slider

Karnataka Voice

Latest Kannada News

ಜನ ಬೀದಿಯಲ್ಲಿ ಮಾತಾಡುತ್ತಿದ್ದಾರೆಂದು ಉತ್ತರ ಕೊಡುತ್ತಿದ್ದೇವೆ: ಚೀನಾದಿಂದ ಖರೀದಿ ನಡೆದದ್ದು ನಿಜ: ಸತ್ಯ ಒಪ್ಪಿಕೊಂಡ ಸಚಿವದ್ವಯರು

Spread the love

ಬೆಂಗಳೂರು: ಕೊರೋನಾ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ ಹತ್ತು ದಿನಗಳ ನಂತರ ವಿಕಾಸಸೌಧದಲ್ಲಿ ಸಚಿವ ಶ್ರೀರಾಮುಲು, ಅಶ್ವತ್ಥ್ ನಾರಾಯಣ ಅಧಿಕಾರಿಗಳೊಂದಿಗೆ ಮಾಧ್ಯಮದಗಳ ಮುಂದೆ ವಿವರ ನೀಡಿದರು. ಯಾರು ಯಾರು ಏನೇನು ಅಂದ್ರು ಸಂಪೂರ್ಣ ವಿವರ ಇಲ್ಲಿದೆ ನೋಡಿ..

 ಅಶ್ವತ್ಥ್ ನಾರಾಯಣ್: ಪ್ರತಿಪಕ್ಷದ ನಾಯಕರು ಆರೋಗ್ಯ ಇಲಾಖೆಯಲ್ಲಿ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಕ್ಯೂರ್ಮೆಂಟ್ ವಿಚಾರವಾಗಿ ಆರೋಪ ಮಾಡಿದ್ದಾರೆ. ಅವರ ಆರೋಪ ಬಹಳ ದೂರ ಇದೆ. ಇದಕ್ಕೆ ಸ್ಪಷ್ಟನೆ ನೀಡಲು ಇವತ್ತು ಶ್ರೀರಾಮುಲು, ಇಲಾಖೆಯ ಕಾರ್ಯದರ್ಶಿಗಳು ಬಂದಿದ್ದೇವೆ. ಅಡಿಶನಲ್ ಚೀಫ್ ಸೆಕ್ರೆಟರಿ ಜಾವೇದ್ ಅಕ್ತರ್ ಮಾತಾಡುತ್ತಾರೆ.

ಜಾವೇದ್ ಅಖ್ತರ್: ಇಲಾಖೆಯು ಡ್ರಗ್ಸ್ ತೆಗದುಕೊಂಡಿದೆ. ಮಾರ್ಚ್ ನಲ್ಲಿ ಪ್ರಕ್ಯೂರ್ಮೆಂಟ್ ನಿಂದ ಸ್ಟಾರ್ಟ್ ಮಾಟಿದ್ವಿ. ಟೋಟಲ್ ಡ್ರಗ್ಸ್ , ಮತ್ತು ಎಕ್ವಿಮೆಂಟ್ಸ್ 290 ಕೋಟಿ ಕೊಟ್ಟು ತೆಗೆದುಕೊಂಡೆದ್ದೇವೆ. ಪಿಪಿಇ ಕಿಟ್ ಮಾರ್ಚ್ ನಲ್ಲಿ ಇರಲಿಲ್ಲ. ಸ್ಯಾನಿಟೈಸರ್ ಆಗ 20 ಸಾವಿರ ರಿಕ್ವೈರ್ ಮಾಡುತ್ತಿತ್ತು ಸರ್ಕಾರ. ಡ್ರಗ್ಸ್ ಗೆ ಬಾರಿ ಬೇಡಿಕೆ ಪ್ರಾರಂಭ ಆಯ್ತು. ಸ್ಯಾನಿಟೈಸರ್ ಸಪ್ಲೆ ಕಡಿಮೆ ಇತ್ತು. ನಮ್ಮಲ್ಲಿ 10ಕ್ಕಿಂತ ಹೆಚ್ಚು ಸ್ಯಾನಿಟೈಸರ್ ಸಪ್ಲೆ ಮಾಡುವ ಕಂಪನಿ ಇದ್ದಾವೆ. ವೆಂಟಿಲೇಟರ್ ಟೋಟಲ್ 3 ತರಹದ ಖರೀದಿ, 2100 ಕೇಂದ್ರಕ್ಕೆ ಸಲ್ಲಿಸಿದ್ವಿ. 740 ಮಾತ್ರ ನಮಗೆ ಬಂದಿತ್ತು. ಪ್ರೈವೇಟ್ ನಿಂದ 560000 ಗೆ ವೆಂಟಿಲೇಟರ್  ಖರೀದಿ ಮಾಡಿದ್ವಿ. ಟೆಸ್ಟ್ ಕಿಟ್ಸ್ ವ್ಯಾಲಿಡೆಟ್ ಗೆ ಕಳಿದ್ವಿ, ವ್ಯಾಲಿಡ್ ಆಗಲಿಲ್ಲ. 250000 ಆರ್ಡ್ ಮಾಡಿದ್ವಿ, ಅದನ್ನ ವಾಪಸ್ ಕಳಿಸಿದ್ವಿ. ಸ್ಯಾನಿಟೈಸರ್ ಮಾರ್ಚ್ ನಲ್ಲಿ ಸಿಎಸ್ ಆರ್ ನಲ್ಲಿ 2 ಲಕ್ಷಕ್ಕೆ ಬಂದಿತ್ತು ನಾವು ಖರೀದಿ ಮಾಡಲಿಲ್ಲ. ಸ್ಯಾನಿಟೈಸರ್ ಪರ್ ಲೀಟರ್ ಗೆ ಮಿನಿಸ್ಟರ್ ಆಫ್ ಕನ್ಸುಮರ್ ನಿಂದ ನಿಗದಿ ಮಾಡಿತ್ತು. 250ರೂಪಾಯಿಗೆ 500 ಎಂ ಎಲ್ ಗೆ ತಗೊಂಡಿದ್ವಿ. ಮಾರ್ಚ್ ನಲ್ಲಿ ನಮಗೆ ಸರಿಯಾಗಿ ಸಪ್ಲೆ ಇರಲಿಲ್ಲ. ಬಿ ವೈ ಡಿ ನಿಂದ ಚೀನಾ ಮಾಸ್ಕ್ ತೆಗೆದುಕೊಂಡಿರುವುದು ನಿಜ.

ಅಶ್ವತ್ಥ್ ನಾರಾಯಣ್: ನಾವು ಸ್ಪಷ್ಟವಾಗಿ ಉತ್ತರ ಕೊಡುತ್ತೇವೆ. ಯಾವುದನ್ನು ಮರೆಮಾಚುವುದಿಲ್ಲ. ಜನ ಬೀದಿಯಲ್ಲಿ ಮಾತಾಡುತ್ತಿದ್ದಾರೆ ಎಂದು ಇವತ್ತು ಉತ್ತರ ಕೊಡುತ್ತೇವೆ. ವೆಂಟಿಲೇಟರ್ ಬಗ್ಗೆ ವೆಂಕಟೇಶ್ ಉತ್ತರ ನೀಡುತ್ತಾರೆ.

ಶ್ರೀರಾಮುಲು: ಬೆಳಗ್ಗೆಯಿಂದ ನಾನು ಅಶ್ವತ್ಥ್ ನಾರಾಯಣ್ ಸಭೆ ಮಾಡಿದ್ವಿ. ಸ್ಪಷ್ಟವಾಗಿ ಉತ್ತರ ಕೊಡುತ್ತೇವೆ. ಈ ಪರಿಸ್ಥಿತಿಯಲ್ಲಿ ನಾವು ಯಾರು ಹೀಗೆ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ನಮ್ಮ ಸರ್ಕಾರದಲ್ಲಿ ಪಾರದರ್ಶಕವಾಗಿ ಖರೀದಿ ಮಾಡಿದ್ದೇವೆ. ಬೀದಿಯಲ್ಲಿ ಜನರು ಮಾತಾಡುತ್ತಿದ್ದಾರೆ. ಜೊತೆಗೆ ವಿರೋಧ ಪಕ್ಷದ ನಾಯಕರು ಮಾತಾಡುತ್ತಿದ್ದಾರೆ.  ಸಿದ್ದರಾಮಯ್ಯ ಅವರ ಆರೋಪ 1 ವೆಂಟಿಲೇಟರ್ ಗೆ 14 ಲಕ್ಷ ನೀಡಿ 1000 ವೆಂಟಿಲೇಟರ್ ಖರೀದಿ ಮಾಡಿದ್ದಾರೆ ಎಂದು ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಇಂದು ವೆಂಟಿಲೇಟರ್ 4 ಲಕ್ಷದಿಂದ 50ಲಕ್ಷ ದವರೆಗೂ ಇರುತ್ತವೆ.  ನಾನು ಕೇಳಿದೆ ಯಾಕೆ ಹೇಚ್ಚಾಯ್ತು ಎಂದು. ಹೆಚ್ಚು ಸ್ಪೆಸಿಫಿಕೇಶನ್ ಹೆಚ್ಚು ಇದ್ರೆ ಹೆಚ್ಚು , ಕಡಿಮೆ ಇದ್ರೆ ಕಡಿಮೆ ಆಗುತ್ತೆ ಎಂದರು. ರಾಗಿ ಕಾಳಿನಷ್ಟು ಮುಚ್ಚಿಡುವುದಿಲ್ಲ. ರಾಜ್ಯದಲ್ಲಿ ಇರುವ ಎಲ್ಲಾ ನಾಯಕರು ವೆಂಟಿಲೇಟರ್ ಖರೀದಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ವಿ. ಕೇಂದ್ರದಿಂದ 640 ಬಂದಿದೆ. 560000 ಗೆ ಮೈಸೂರಿನ ಸ್ಕಾನರ್ ಕಂಪನಿಗೆ ನೀಡಿ 80 ವೆಂಟಿಲೇಟರ್ ತೆಗೆದುಕೊಂಡ್ವಿ. 28 ವೆಂಟಿಲೇಟರ್ ಗೆ  33000000 ಕೊಟ್ಟು ಖರೀದಿ ಮಾಡಿದ್ವಿ. ಪಿಪಿಇ ಕಿಟ್ ಗೆ 4 ಲಕ್ಷದ 89 ಸಾವಿರ ಪಿಪಿಇ ಕಿಟ್ ಅನ್ನು 48 ಕೋಟಿ ಆಗಬೇಕಿತ್ತು. ಆದರೆ, 150 ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ ಎಂದು  ಸಿದ್ದರಾಮಯ್ಯ ಹೇಳುತ್ತಾರೆ. ನಾಲ್ಕು ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಇತ್ತು. 4 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಚಿಕಿತ್ಸೆ ಮಾಡುವುದಕ್ಕೆ ಆಗಲ್ಲ ಎಂದು, 6 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ನೀಡಿದ್ವಿ 1 ಲಕ್ಷ ಕೊಟ್ವಿ. 40 ಸಾವಿರ 350 ಮಾತ್ರ ಸಪ್ಲೆ ಮಾಡಿದ್ರು. 6 ಕಂಪನಿ ನಾವು ಗುರುತಿಸಿಲ್ಲ, ಕೇಂದ್ರ ಸರ್ಕಾರ ಗುರುತ್ತಿಸಿತ್ತು. ಕೇಂದ್ರ ಗುರುತಿಸಿದ ಕಂಪನಿಗೆ ನಾವು ಕೊಟ್ಟಿದ್ವಿ. 665 ಕಿಟ್ ನೀಡಬೇಕು ಎಂದು ಇಂಡಾಸ್ ಬೈಯಾಸ್ ಕಂಪನಿಗೆ ನೀಡಿದ್ವಿ. ಅವತ್ತು 10 ಕಾಂಪೋನೆಂಟ್ ಬೇಕು ಅಂತ ಚೀನಾ ಕಂಪನಿಗೆ ನೋಡಬೇಕಾಯ್ತು ಚೀನಾ , ಸಿಂಗಪುರ್ ನಿಂದ 10 ಕಾಂಡದ ಇರುವ ಪಿಪಿಇ ಕಿಟ್ ಖರೀದಿ ಮಾಡಿದ್ವಿ. ಏಪ್ರಿಲ್ 8ಕ್ಕೆ,  2100 ರೂಪಾಯಿ ಆಯ್ತು. 2104 ರುಪಾಯಿಗೆ ಚೀನಾ ಗ್ಲೋಬಲ್ ಕಂಪನಿಗೆ ನೀಡಿದ್ವಿ , ಆ ನಂತರ ಹೆಚ್ವು ಆಯ್ತು. ಟೋಟಲ್ ಕಿಟ್ 9650000 ಕಿಟ್ ಪರ್ಚೆಸ್ ಮಾಡಿದ್ವಿ. ಟೋಟಲ್ ಪಿಪಿಇ ಕಿಟ್ ಗೆ 793516816 ಕೋಟಿ ರೂಪಾಯಿ ಖರ್ಚು ಆಗಿದೆ. ಸಿದ್ದರಾಮಯ್ಯ ಅವರ ಆರೋಪ ೧೫೦ ಕೋಟಿ. ವೀನಸ್ ಕಂಪನಿಗೆ 147 ರುಪಾಯಿಗೆ 150000 ಸಾವಿರ ಎನ್ 95 ಮಾಸ್ಕ್ ಖರೀದಿ ಮಾಡಿದ್ವಿ. ಮಾರ್ಚ್ ಏಟೆಕ್ ಕಂಪನಿಗೆ 156 ರುಪಾಯಿ ಎನ್ 95 ಖರೀದಿ ಮಾಡಿದ್ವಿ. ಎನ್ 95 ಮಾಸ್ಕ್ ಗೆ 115158226 ಕೋಟಿ, 11ಲಕ್ಷದ 65 ಸಾವಿರ ಮಾಸ್ಕ್ ಗೆ.  ಸಿಂಗಲ್ ರುಪಾಯಿ ಅವ್ಯವಹಾರ ಆಗಿದ್ರೆ ನಾನು ಈ ಸ್ಥಾನದಲ್ಲಿ ಕೂರುವುದಿಲ್ಲ ರಾಜೀನಾಮೆ ಕೊಟ್ಟು ಹೋಗುತ್ತೇನೆ.


Spread the love

Leave a Reply

Your email address will not be published. Required fields are marked *