ತಮ್ಮಾನು ಕಾಲು ಮುಗಿತೇನಿ ಅಂದಾನ್, ನಾನೂ ಕಾಲ್ ಮುಗಿತೇನಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ…!!!

ಧಾರವಾಡ: ಜಿಲ್ಲೆಯ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಒಡೆತನ ಮೃಣಾಲ್ ಶುಗರ್ ಫ್ಯಾಕ್ಟರಿ ಭೂಮಿಗೆ ಪೂಜೆಗೆ ಬಂದಿದ್ದ ಸಚಿವೆ ಹೆಬ್ಬಾಳಕರ ಅವರಿಗೆ ಯಾದವಾಡ ಗ್ರಾಮಸ್ಥರು ಪ್ರತಿಭಟನೆ ಬಿಸಿ ಮುಟ್ಟಿಸಿದರು.
ಗ್ರಾಮದಲ್ಲಿ ಫ್ಯಾಕ್ಟರಿ ಆರಂಭಕ್ಕೆ ವಿರೋಧಿಸುತ್ತಾ ಯಾದವಾಡ ಗ್ರಾಮಸ್ಥರು, ಸಚಿವೆ ಅವರನ್ನ ನೆಲದ ಮೇಲೆ ಕುಳಿತು ಪ್ರತಿಭಟನೆ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುಳಿತುಕೊಂಡು ಮಾತನಾಡೋಣ ಎಂದು ಗ್ರಾಮಸ್ಥರಿಗೆ ಕೈ ಮುಗಿದರು.
ನಾವು ರೈತರ ಫಲವತ್ತಾದ ಜಮೀನು ಪಡೆದಿಲ್ಲಾ, ಮಂಜೂರು ಭೂಮಿ ಪಡೆದಿದ್ದೇವೆ ಎಂದ ಎಂಎಲಸಿ ಚೆನ್ಮರಾಜ್ ಹಟ್ಟಿಹೊಳಿ ಮಾತಿಗೆ, ಆಕ್ರೋಶಗೊಂಡ ಗ್ರಾಮಸ್ಥರು, ರೈತರು ಜಮೀನು ಕೊಟ್ಟವರೆಗೆ ಫ್ಯಾಕ್ಟರಿ ಮಾಡುತ್ತೆವೆಂದು ಮೊದಲಿಗೆ ಹೇಳಿಯೇ ಇಲ್ಲಾ. ಏಜೆಂಟರ ಮುಖಾಂತರ ಮೋಸದಿಂದ ಫಲವತ್ತಾದ ಜಮೀನು ಪಡೆದಿದ್ದೀರಿ. ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಫ್ಯಾಕ್ಟರಿ ಬೇಡವೇ ಬೇಡಾ ಎಂದು ಹರ್ಷಾ ಶುಗಸ್ ಫ್ಯಾಕ್ಟರಿ ಉದಾಹರಣೆ ಸಮೇತ ಮಾಹಿತಿ ನೀಡಿದರು.
ಪ್ರತಿಭಟನೆ ಬಿಸಿ ಅನುಭವಿಸಿದ ಸಚಿವೆ ಹೆಬ್ಬಾಳಕರ್ ನಿಮ್ಮ ಕೈಮುಗಿದು ಕಾಲಿಗೆ ಬಿಳುವೆ ಪ್ರತಿಭಟನೆ ಮಾಡಬೇಡಿ, ನಾನು ಯಾರಿಗೂ ಮೋಸ ಮಾಡಿ ಬೆಳೆದಳಲ್ಲಾ. ನಾನು ರೈತನ ಮಗಳು, ರೈತರ ಸಂಕಷ್ಟ ಗೊತ್ತು ಎಂದು ಸಮಸ್ಯೆಯನ್ನ ಕುಳಿತುಕೊಂಡು ಮಾತನಾಡಿ ಬಗೆಹರಿಸೋಣ ಎಂದರು.