ಹುಬ್ಬಳ್ಳಿಯವರನ್ನ ಕಾಯಲು ಹೇಳಿ ಹೊರಟ ಬೆಂಗಳೂರು ಸಚಿವ

ಹುಬ್ಬಳ್ಳಿ: ವಸತಿ ಸಚಿವ ವಿ. ಸೋಮಣ್ಣ ಅವರು ಜಗದೀಶ ನಗರಕ್ಕೆ ಭೇಟಿ ಕೊಡುವುದಾಗಿ ಭರವಸೆ ನೀಡಿದ್ದರಿಂದ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ನಿವಾಸಿಗಳು ಅವರಿಗಾಗಿ ಕಾಯುತ್ತ ಕುಳಿತಿದ್ದರು. ಆದರೆ ಸಚಿವರು ಸ್ಥಳಕ್ಕೆ ಬಾರದೆ ನೇರವಾಗಿ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು.
ವಸತಿ ಸಚಿವ ಸೋಮಣ್ಣರನ್ನ ನಿನ್ನೆ ಭೇಟಿಯಾಗಿದ್ದ ಸಮಯದಲ್ಲಿ ಜನರೊಂದಿಗೆ ಸಾಕಷ್ಟು ಉತ್ತಮವಾಗಿ ಮಾತನಾಡಿ, ನಾಳೆ ಬಂದೇ ಬರುವುದಾಗಿ ಭರವಸೆ ನೀಡಿದ್ದರು.
ತಮ್ಮ ಕಷ್ಟಕ್ಕೆ ಸಚಿವರು ಬಹಳ ಚೆನ್ನಾಗಿ ಪರಿಹಾರ ಕೊಡ್ತಾರೆ. ಎಷ್ಟು ಚೆಂದ್ ಮಾತಾಡಿದ್ರಲ್ಲಾ ಎಂದುಕೊಂಡು ರಾತ್ರಿ ಕಳೆದು ಬೆಳಗಾಗುವುದನ್ನ ಕಾಯುತ್ತಿದ್ದವರಿಗೆ, ಬೆಳಿಗ್ಗೆ ಬೆಂಗಳೂರು ಸಚಿವರ ಬಣ್ಣ ಗೊತ್ತಾಗಿದೆಯಂತೆ.
ಅವರಿಗಾಗಿ ಸಚಿವರೇಳುವ ಮುನ್ನವೇ ರೆಡಿಯಾಗಿ ಕುಳಿತವರನ್ನ ಕಡೆಗಣಿಸಿ, ನೇರವಾಗಿ ಬಾಗಲಕೋಟೆಯತ್ತ ಸಚಿವ ಸೋಮಣ್ಣ ಪ್ರಯಾಣ ಬೆಳೆಸಿದ್ದಾರೆ. ಇಲ್ಲಿವರು, ಮತ್ತೆ ಹಿಡಿಶಾಪ ಹಾಕಿಕೊಂಡು ಕೂಡುವಂತಾಗಿದೆ.