Posts Slider

Karnataka Voice

Latest Kannada News

ಸಚಿವ ಸುಧಾಕರ ತಂದೆ-ಪತ್ನಿ-ಮಗಳಿಗೆ ಕೊರೋನಾ ಪಾಸಿಟಿವ್: ಗಂಡು ಮಕ್ಕಳು ಮತ್ತು ಸಚಿವರಿಗೆ ನೆಗೆಟಿವ್

1 min read
Spread the love

ಬೆಂಗಳೂರು: ವೈಧ್ಯಕೀಯ ಸಚಿವ ಸುಧಾಕರ ಅವರ ಕುಟುಂಬಕ್ಕೂ ಕೊರೋನಾ ವೈರಸ್ ಸೋಂಕು ತಗುಲಿದ್ದು, ಅವರೆಲ್ಲರ ಆರೋಗ್ಯದ ಬಗ್ಗೆ ಸ್ವತಃ ಸಚಿವರೇ ಟ್ವೀಟ್ ಮಾಡಿದ್ದಾರೆ.

ಕೊರೋನಾ ವೈರಸ್ ತೊಲಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮ ವಹಿಸುತ್ತಿರುವ ಸಚಿವ ಸುಧಾಕರರ ತಂದೆಗೆ ನಿನ್ನೆಯಷ್ಟೇ ಕೊರೋನಾ ಪಾಸಿಟಿವ್ ದೃಢವಾಗಿತ್ತು. ಬೆಳಗಿನ ಜಾವ ಸಚಿವರ ಪತ್ನಿ ಹಾಗೂ ಪುತ್ರಿಗೂ ಕೊರೋನಾ ವೈರಸ್ ಪಾಸಿಟಿವ್ ಬಂದಿರುವುದನ್ನ ಸ್ವತಃ ಸಚಿವರೇ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

ಕೊರೋನಾ ವಾರಿಯರ್ ಥರವೇ ಕಾರ್ಯನಿರ್ವಹಿಸುತ್ತಿರುವ ಸಚಿವ ಸುಧಾಕರ ಅವರ ಕುಟುಂಬದಲ್ಲಿರುವ ಅವರಿಬ್ಬರ ಗಂಡು ಮಕ್ಕಳಿಗೆ ನೆಗೆಟಿವ್ ಬಂದಿದೆ. ಸ್ವತಃ ಸಚಿವರಿಗೂ ನೆಗೆಟಿವ್ ಬಂದಿದೆ. ಪಾಸಿಟಿವ್ ಆಗಿರುವ ಕುಟುಂಬದ ಸದಸ್ಯರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ.


Spread the love

Leave a Reply

Your email address will not be published. Required fields are marked *