ಧಾರವಾಡ “SP” ಸೇರಿ ಮೊಬೈಲ್ ರಿಸೀವ್ ಮಾಡದ ಅಧಿಕಾರಿಗಳಿಗೆ ನೋಟಿಸ್: ಜಿಲ್ಲಾ ಉಸ್ತುವಾರಿ ಸಚಿವರ ಖಡಕ್ ಆರ್ಡರ್…
1 min readಧಾರವಾಡ: ಸಾರ್ವಜನಿಕರ ಹಿತ ಕಾಪಾಡುವ ಉದ್ದೇಶದಿಂದ ಕೊಡಬೇಕಾದ ಮಾಹಿತಿಯನ್ನ ಕೊಡದೇ ನುಣುಚಿಕೊಳ್ಳುವುದನ್ನ ತಾವೂ ಒಪ್ಪಿಕೊಳ್ಳುವುದಿಲ್ಲ. ಹಾಗೇ ಮಾಡುವ ಪ್ರತಿಯೊಬ್ಬರಿಗೂ ನೋಟಿಸ್ ಜಾರಿ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಜಿಲ್ಲಾಧಿಕಾರಿಗಳಿಗೆ ಖಡಕ್ ಆದೇಶ ಮಾಡಿದರು.
ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಪೊಲೀಸ್ ಕಮೀಷನರ್ ಲಾಬುರಾಮ್ ಅವರನ್ನ ಹೊರತುಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಪೋನ್ ರಿಸೀವ್ ಮಾಡಲ್ಲವೆಂಬ ದೂರು ಬಂದ ತಕ್ಷಣವೇ ಸಚಿವರು ಈ ಆದೇಶ ಮಾಡಿದರು.
ಈ ಘಟನೆ ನಡೆದ ಕೆಲವೇ ಸಮಯದಲ್ಲಿ ಜಿಲ್ಲಾಧಿಕಾರಿಗಳು ನೀಡಿರುವ ಆದೇಶ ಇಂತಿದೆ…
ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕಾಗಿ:
ತಮ್ಮ ಇಲಾಖೆ ಯೋಜನೆಗಳ ಮತ್ತು ಇಲಾಖೆಗೆ ಸಂಬಂದಿತ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ, ಮಾಧ್ಯಮ ಪ್ರತಿನಿಧಿಗಳಿಂದ ಕರೆ ಬಂದಾಗ ತಕ್ಷಣ ಸ್ಪಂದಿಸಲು ಸೂಚಿಸಿದೆ.
ತಮಗೆ ಕಾರ್ಯ ಒತ್ತಡವಿದ್ದಲ್ಲಿ ತಮ್ಮ ಅಧೀನ ಅಧಿಕಾರಿಗಳಿಂದ ಮಾಹಿತಿ ನೀಡಲು ಕ್ರಮವಹಿಸಬೇಕು. ಸಾರ್ವಜನಿಕ ಹಿತಾಸಕ್ತಿ ಸಂಬಂದಿಸಿದಂತೆ ಪ್ರಕಟಣೆ, ಸುದ್ದಿಗಳಿದ್ದಲ್ಲಿ ವಾರ್ತಾ ಇಲಾಖೆ ಮೂಲಕ ನೀಡಬಹುದು.
ಅಧಿಕಾರಿಗಳು ಸಾರ್ವಜನಿಕರ ಕರೆಗಳನ್ನು ತಕ್ಷಣಕ್ಕೆ ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಜಿಲ್ಲಾಡಳಿತಕ್ಕೆ ಬರುತ್ತಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹರಿಸಬೇಕೆಂದು ಈ ಮೂಲಕ ನಿರ್ದೇಶಿಸಿದೆ.
This is DC sir instructions to all officers