ಶಿಕ್ಷಣ ಸಚಿವ ಸುರೇಶಕುಮಾರಗೂ ಕೊರೋನಾ ಪಾಸಿಟಿವ್ ದೃಢ
ಬೆಂಗಳೂರು: ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರೋಗದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲವೆಂದು ಸ್ವತಃ ಸಚಿವ ಸುರೇಶಕುಮಾರ ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕನಲ್ಲಿ ಬರೆದುಕೊಂಡಿರುವ ಸಚಿವ ಸುರೇಶಕುಮಾರ, ಕೋವಿಡ್-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನಾನು ಇನ್ನು ಕೆಲವು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರುತ್ತೇನೆ. ಯಾವುದೇ ಲಕ್ಷಣವಿಲ್ಲದಿರುವುದರಿಂದ ಯಾವುದೇ ರೀತಿ ಆತಂಕವಿಲ್ಲ ಎಂದು ಬರೆದುಕೊಂಡಿದ್ದರು.
ಶಿಕ್ಷಣ ಸಚಿವ ಇತ್ತೀಚೆಗೆ ಬೀದರ ಜಿಲ್ಲೆಗೂ ಭೇಟಿ ನೀಡಿ, ಹಲವು ಶಾಲೆಗಳಿಗೆ ಭೇಟಿ ನೀಡಿದ್ದರು. ಶೆಡ್ ಶಾಲೆಗಳಿಗೂ ಭೇಟಿಯನ್ನ ನೀಡಿ, ಸಂಬಂಧಿಸಿದವರನ್ನ ತರಾಟೆಗೆ ತೆಗೆದುಕೊಂಡಿದ್ದರು.
ಇಂದಷ್ಟೇ ಸಚಿವರಿಗೆ ದೃಢಪಟ್ಟಿರುವುದರಿಂದ ಏಳಕ್ಕೂ ಹೆಚ್ಚು ದಿನ ಕ್ವಾರಂಟೈನ್ ಆಗಲಿದ್ದಾರೆ.