ಸಚಿವ ಸಂತೋಷ ಲಾಡ್ “ನಮ್ಮ ನಗರ ಸ್ವಚ್ಚ ನಗರ” ಮಾಡುತ್ತಿದ್ದರೇ, ಕೆಲವರು ‘ಕಡ್ಡಿ ಆಡಿಸ್ತಾ ನಿಂತಿದ್ರು’…. ಇವರ ಕಥೆ ಇಷ್ಟೇ…!!!

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬೆಳ್ಳಂ ಬೆಳಿಗ್ಗೆ ಆಗಮಿಸಿ ನೇರವಾಗಿ ನಮ್ಮ ನಗರ ಸ್ವಚ್ಚ ನಗರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉತ್ಸಾಹದಿಂದ ಸ್ವಚ್ಚತೆಯನ್ನ ಮಾಡುತ್ತಿರುವುದು ಕಂಡು ಬಂದಿತು.
ಜಿಲ್ಲಾಡಳಿತವೂ ಹಲವು ಇಲಾಖೆಯವರು ಭಾಗವಹಿಸುವಂತೆ ಹೇಳಿದ್ದರಿಂದ ಸ್ವಚ್ಚತಾ ಕಾರ್ಯದಲ್ಲಿ ಕಾಟಾಚಾರಕ್ಕೆ ಭಾಗವಹಿಸಿ, ಹೋಗುವುದು ಕಂಡು ಬಂದಿತು.
ವ್ಯವಸ್ಥೆಯಲ್ಲಿ ಮಿಕ್ಕಿದ ಅಧಿಕಾರಿಗಳಂತೂ ಕೈಯಲ್ಲೊಂದು ಕಟ್ಟಿಗೆ ಹಿಡಿದು ಕಡ್ಡಿಯಾಡಿಸುವ ದೃಶ್ಯಗಳು ಸೆರೆಯಾಗಿವೆ. ಕಸ ಎಲ್ಲಿ ಕೈ ಕಡಿಯತ್ತೋ ಅಂದುಕೊಂಡು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದಂತೆ ಕಂಡು ಬಂದದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು.