ನೀವೇನು “ಲಾರ್ಡಾ”- ಸರಿಯಿದ್ದರೇ “ಸರ್ವೋತ್ತಮ ಪ್ರಶಸ್ತಿ”- ಇಲ್ಲದಿದ್ರೇ “ಕ್ರಿಮಿನಲ್ ಕೇಸ್”: ಸಚಿವರ ವಾರ್ನಿಂಗ್…
1 min readಧಾರವಾಡ: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣಭೈರೇಗೌಡ ಗರಂ ಆಗಿರುವ ಘಟನೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದಿದೆ.
ಕಂದಾಯ ಇಲಾಖೆಯ ಪ್ರಗತಿ ಪರಿಶಿಲನೆ ಸಭೆಯಲ್ಲಿ ಸಚಿವ ಕೃಷ್ಣ ಬೈರೆಗೌಡ ಭೂ ದಾಖಲೆಗಳ ಸರ್ವೆ ಇಲಾಖೆ ಅಧಿಕಾರಿಗಳ ತರಾಟೆ ತೆಗೆದುಕ್ಕೊಂಡರು. ಡಿಡಿಎಲ್‌ಆರ್ ಮೋಹನ್ ಶಿವನ್ನವರ ಕಾರ್ಯವೈಖರಿ ಬಗ್ಗೆ ಗರಂ ಆಗಿ ಆಕ್ರೋಶ ಹೊರ ಹಾಕಿದರು.
ಪೋಡಿ ಸರ್ವೆಗೆ ಸಂಬಂಧಿಸಿದಂತೆ ಪರಿಶೀಲನೆ ಈ ವೇಳೆ ಜನರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂದು ಸಚಿವರ ಕ್ಲಾಸ್ ತೆಗೆದುಕೊಂಡರು. ಸಚಿವರ ಕ್ಲಾಸ್ ಬಳಿಕವೂ ತಮ್ಮದೇ ಸಮಜಾಯಿಸಿ ಹೇಳಿದ ಅಧಿಕಾರಿ ನಾ ಎಷ್ಟು ಹೇಳಿದ್ರೂ ನೀವು ಒಪ್ಪೊಲ್ಲ ಬಿಡಿ. ನೀವು ನಮ್ಮದು ಕೇಳೋದಿಲ್ಲ ನೀವೇನು ಲಾರ್ಡಾ ಬೆಳಗ್ಗೆಯಿಂದ ಹೇಳತಾ ಇದ್ದೇನೆ, ನಿಮಗೆ ತಿಳಿತಾ ಇಲ್ವಾ ಸರ್ವೆ ಇಲಾಖೆಯವರು ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ? ನಿಮ್ಮ ಮನಃಸ್ಥಿತಿ ಬದಲಾಯಿಸಿಕೊಳ್ಳಿ ಇರೋ ಕಾನೂನು ನಿಮ್ಮ ತಲೆಗೆ ಹೋಗೋದಿಲ್ಲ ಅಂದ್ರೆ ಹೇಗೆ? ಎಲ್ಲ ಜನ ಬಂದು ನಿಮ್ಮ ಮನೆ ಬಾಗಿಲು ಕಾಯಬೇಕಾ? ಸರ್ವೆ ಅಧಿಕಾರಿಗಳಾದ ಎಡಿ ಎಲ್ ಆರ್ , ಡಿ ಡಿ ಎಲ್ ಆರ್, ಜೆಡಿ ಎಲ್ ಆರ್ ಗೆ ಕ್ಲಾಸ್ ತೆಗೆದುಕ್ಕೊಂಡರು ನೀವು ಹೇಳಿದ ಹಾಗೆ ಜಗತ್ತು ಕುಣಿಯಬೇಕಾ? ಎಂದು ಸಚಿವರು ತರಾಟೆಗೆ ತೆಗೆದುಕೊಂಡರು
ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದ್ರೆ ಪ್ರಶಸ್ತಿ ಕೊಡಲಾಗುವುದು ತಪ್ಪು ಮಾಡಿದ್ರೆ ಅಮಾನತು ಮಾತ್ರವಲ್ಲ ಕ್ರಿಮಿನಲ್ ಕೇಸ್ ಸಹ ಹಾಕುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಬೈರೆಗೌಡ ಖಡಕ್ ಎಚ್ಚರಿಕೆ ನೀಡಿದರು.
ಸರಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆ ಮೂಲಕವೇ ಆಗಬೇಕು ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ ಒಳ್ಳೆ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ ಅವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ.
ವಂಚನೆ ಮಾಡಿದ ಅಧಿಕಾರಿಗಳು ಅಮಾನತು ಮಾಡುತ್ತೇವೆ ಜೊತೆಗೆ ಕ್ರಿಮಿನಲ್ ಕೇಸ್ ಸಹ ಹಾಕುತ್ತೇವೆ ಕೆಲವರ ಉದ್ದೇಶವೇ ಭ್ರಷ್ಟಾಚಾರ ಆಗಿರುತ್ತದೆ. ಅದು ಕ್ರಿಮಿನಲ್ ಪ್ರಕರಣ ಸಹ ಆಗುತ್ತದೆ. ಈಗಾಗಲೇ ಇಬ್ಬರು ಎಸಿಗಳ ಮೇಲೆ ಕ್ರಿಮಿನಲ್ ಕೇಸ್ ಆಗಿದೆ. ಇಲ್ಲಿವರೆಗೆ ಬಡಪಾಯಿ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕ್ರಮ ಆಗುತ್ತಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತಾ ಹೇಳುತ್ತಿದ್ದರು. ಆದರೆ, ಈಗ ತಪ್ಪು ಮಾಡಿದ ಇಬ್ಬರ ಎಸಿಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಹಿಂದೆ ಹೇಗೆ ಕೆಲಸ ಮಾಡಿದ್ದಿರಿ ನಾವು ಕೇಳುವುದಿಲ್ಲ. ಆದರೆ ಈಗ ಜನ ಪರವಾಗಿ ಕೆಲಸ ಮಾಡಬೇಕು ಸಿಎಂ ಕೂಡಾ ಕೇಳಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ಮೆಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಹೇಳಿದ್ದಾರೆ ಸಾರ್ವಜನಿಕರಿಗೆ ನಷ್ಟ ಕೊಡುತ್ತಾರೆ ಅಂತವರ ಮೆಲೆ ನಾನು ಕ್ರಮ ಕೈಗೊಳಲು ಹಿಂದೆ ಸರಿಯಲ್ಲ ಇಗಾಗಲೆ ಇಬ್ಬರ ಎಸಿ ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಸಿಸ್ಟಮ್ನಲ್ಲಿ ಕೆಲಸ ಮಾಡಬೇಕು. ನಾವು ಹೇಳಿದ ಹಾಗೆ ಕೆಲಸ ಮಾಡಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಚಿವ ಬೈರೆಗೌಡರು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.