Posts Slider

Karnataka Voice

Latest Kannada News

ಸಚಿವ ಮುನೇನಕೊಪ್ಪರ ಸಹೋದರ “ಡಾಕ್ಟರ್ ಅಣ್ಣಾರ” ಇನ್ನಿಲ್ಲ…

1 min read
Spread the love

ಹುಬ್ಬಳ್ಳಿಯ ಹೆಲ್ಪ್ ಲೈನ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 2.30ರ ವರೆಗೆ ಪಾರ್ಥಿವ ಶರೀರ ಇರಲಿದ್ದು, ನಂತರ ರಾತ್ರಿ 8 ಗಂಟೆಯವರೆಗೆ ವಿಜಯನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತದನಂತರ ನಿವಾಸದಿಂದ ಲೋಕಪ್ಪನ ಹಕ್ಕಲದ ಮೂಲಕ ಕಿಮ್ಸಗೆ ಪಾರ್ಥಿವ ಶರೀರವನ್ನ ತೆಗೆದುಕೊಂಡು ಹೋಗಿ ದೇಹದಾನ ಮಾಡಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ: ಸಹೃದಯಿಯಾಗಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹೋದರ ಡಾ.ಮಲ್ಲನಗೌಡ ಪಾಟೀಲ ಮುನೇನಕೊಪ್ಪ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.


ನವಲಗುಂದ ಕ್ಷೇತ್ರದ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಹಿರಿಯ ಸಹೋದರರಾಗಿದ್ದ ಡಾ.ಮಲ್ಲನಗೌಡರು, ಕ್ಷೇತ್ರದಲ್ಲಿ ‘ಡಾಕ್ಟರ್ ಅಣ್ಣಾರ’ ಎಂದೇ ಗುರುತಿಸಿಕೊಂಡಿದ್ದರು. ಬಡವರ ಪರವಾದ ಮನಸ್ಥಿತಿ ಹೊಂದಿದ್ದ ಅವರು, ಅದೇ ಕಾರಣಕ್ಕೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಜನಪರ ಸೇವೆಯಲ್ಲಿ ತೊಡಗಿದ್ದರು.
ಹುಬ್ಬಳ್ಳಿಯ ಕಿಮ್ಸನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಅವರು, ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಲೇ ಜನರ ನೋವಿಗೆ ಸದಾಕಾಲ ಸ್ಪಂಧಿಸುತ್ತಿದ್ದರು. ಸಹೋದರ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಬಂದಾಗ, ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದರು.
ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಡಾ.ಮಲ್ಲನಗೌಡರು, ಕ್ರಿಕೆಟ್‍ನಲ್ಲಿ ರಣಜಿ ಹಂತದವರೆಗೂ ಹೋಗಿದ್ದರು. ಉತ್ತಮ ಬ್ಯಾಟಿಂಗ್ ಹಾಗೂ ಬಾಲರ್ ಕೂಡಾ ಆಗಿದ್ದರು. ಸದಾಕಾಲ ಜನರ ನೋವಿಗೆ ಸ್ಪಂಧಿಸುತ್ತಿದ್ದ ಇವರ ನಿಧನ, ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ.ಮಲ್ಲನಗೌಡ ಅವರ ಆಸೆಯದಂತೆ ಅವರ ದೇಹವನ್ನ ಹುಬ್ಬಳ್ಳಿಯ ಕಿಮ್ಸಗೆ ದಾನವನ್ನಾಗಿ ನೀಡಲಾಗುತ್ತಿದ್ದು, ಅವರ ಎರಡು ಕಣ್ಣುಗಳನ್ನ ಡಾ.ಎಂ.ಎಂ.ಜೋಶಿ ಆಸ್ಪತ್ರೆಗೆ ನೀಡಲಾಗುತ್ತಿದೆ. ಈ ಮೂಲಕ ವೈಧ್ಯರಾಗಿದ್ದ ಮಲ್ಲನಗೌಡರು, ತಮ್ಮ ವೈಧ್ಯಕೀಯ ಕ್ಷೇತ್ರಕ್ಕೆ ಉಪಯೋಗವಾಗಲಿದ್ದಾರೆ.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಕುಟುಂಬದಲ್ಲಿ ಕಳೆದ ಎರಡು ವರ್ಷದಲ್ಲಿ ನಾಲ್ಕು ಸಾವುಗಳಾಗಿದ್ದು, ಅವರ ನೋವಿಗೆ ಪಾರವೇ ಇಲ್ಲವಾಗಿದೆ. ಸಚಿವರ ತಾಯಿ, ಸಹೋದರ, ಸಹೋದರನ ಮಡದಿ ಹಾಗೂ ಇದೀಗ ಮತ್ತೋರ್ವ ಸಹೋದರ ಇನ್ನಿಲ್ಲವಾಗಿದ್ದಾರೆ.


Spread the love

Leave a Reply

Your email address will not be published. Required fields are marked *