ಬೆಳ್ಳಂಬೆಳಿಗ್ಗೆ ಸಚಿವ ಬೈರತಿ ಬಸವರಾಜ್ ವಾಣಿಜ್ಯನಗರಿಯಲ್ಲಿ ಓಡಾಟ: ಬೆಳಗಿನ ಸೂರ್ಯ ಕಂಡ ಹಲವರು
ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಇಂದು ಬೆಳ್ಳಂಬೆಳಿಗ್ಗೆ ವಾಣಿಜ್ಯನಗರಿಯ ರೌಂಡಪ್ ಹಾಕಿದ್ರು. ಆರು ಗಂಟೆಗೆ ಅಧಿಕಾರಿಗಳು ಇರಬೇಕೆಂದು ಆದೇಶವಿದ್ದ ಹಿನ್ನೆಲೆಯಲ್ಲಿ ಅನೇಕರು ಇಂದಷ್ಟೇ ಬೆಳಗಿನ ಸೂರ್ಯನನ್ನ ನೋಡುವಂತಾಯಿತು.
ಸಚಿವರೊಂದಿಗೆ ಮಾಹಿತಿ ನೀಡಲು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸಾಥ್ ನೀಡಿದ್ದರು. ಉಣಕಲ್-ಹುಲಕೊಪ್ಪ ಸೇತುವೆಯ ಕಾಮಗಾರಿಯನ್ನ ವೀಕ್ಷಣೆ ಮಾಡಿದರು. ಪಾಲಿಕೆಯ ಸ್ವಚ್ಚತಾ ಕರ್ಮಿಗಳೊಂದಿಗೆ ಕೆಲಕಾಲ ಮಾತನಾಡಿದ ಸಚಿವರು, ಅವರಿಗಿರುವ ತೊಂದರೆಯನ್ನ ಆಲಿಸಿದರು.