ಹುಚ್ಚರಲ್ಲದವರಿಗೆ ಹುಚ್ಚರ ಪಟ್ಟ: ಧಾರವಾಡ ಡಿಮಾನ್ಸ್ ನ ಭಾರೀ ಕರ್ಮಕಾಂಡ ಬಯಲು…!
1 min readಧಾರವಾಡ: ಕೆಲವು ದುಷ್ಟ ಶಕ್ತಿಗಳೊಂದಿಗೆ ನಗರದ ಮೆಂಟಲ್ ಆಸ್ಪತ್ರೆಯಲ್ಲಿದ್ದ ಕೆಲವು ವೈಧ್ಯರು ಕೂಡಿಕೊಂಡು ಉತ್ತಮರನ್ನೇ ಹುಚ್ಚರು ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೇಯಾ ಎಂಬ ಸಂಶಯ ಮೂಡಿದ್ದು, ಹಾಗೇ ಮಾಡಿದ ಓರ್ವ ಮಹಿಳೆಯನ್ನ ಆಸ್ಪತ್ರೆಯಿಂದ ಹೊರಗೆ ತರಲಾಗಿದೆ.
ಚೆನೈ ಮೂಲದ ತಲಾಯಿ ಸೇಲ್ವಂ ಎಂಬ ಮಹಿಳೆ ಸುಂದರರಾಜ್ ಎಂಬ ವ್ಯಕ್ತಿಯೊಂದಿಗೆ ಹರ್ಬಲ್ ಬ್ಯೂಟಿ ಮೆಟಿರಿಯಲ್ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಅದೇ ಕಾರಣಕ್ಕೆ ಹುಬ್ಬಳ್ಳಿಗೆ ಆತನೊಂದಿಗೆ ಬಂದಾಗ, ಆತ ತಲಾಯಿ ಸೆಲ್ವಂ ಎಂಬ ಮಹಿಳೆಯನ್ನ ಮೆಂಟಲ್ ಆಸ್ಪತ್ರೆಗೆ ದಾಖಲು ಮಾಡಿ, ಹೋಗಿದ್ದ.
ಈ ವಿಷಯವನ್ನ ತಿಳಿದ ವಕೀಲರೊಬ್ಬರು ಮಹಿಳೆಯ ಪರವಾಗಿ ಪ್ರಕರಣ ದಾಖಲಿಸಿ, ಆಕೆಯನ್ನ ಹೊರಗೆ ತಂದಿದ್ದು, ತಲಾಯಿ ಸೆಲ್ವಂ, ಮೆಂಟಲ್ ಆಸ್ಪತ್ರೆಯಲ್ಲಿ ತನಗೆ ನೀಡಿದ ಕಿರುಕುಳವನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾಳೆ.
ಆಸ್ಪತ್ರೆಯಲ್ಲಿನ ಡಾ.ರಾಘವೇಂದ್ರ ನಾಯಕ, ಡಾ.ರಂಗನಾಥ ಕುಲಕರ್ಣಿ ಹಾಗೂ ಮಹೇಶ ದೇಸಾಯಿಯವರು, ಸರಿಯಿದ್ದ ಜನರನ್ನ ಹುಚ್ಚರ ಪಟ್ಟ ಕಟ್ಟುವಲ್ಲಿ ನಿರತರಾಗಿದ್ದಾರೆಂದು ತಲಾಯಿ ಸೆಲ್ವಂ ದೂರಿದ್ದು, ಆಸ್ಪತ್ರೆಯಲ್ಲಿ ಇನ್ನೂ ಕೆಲವರು ಇದ್ದಾರೆಂದು ತಿಳಿಸಿದರು.
ಪ್ರಕರಣ ಬಗ್ಗೆ ನ್ಯಾಯವಾದಿ ಎ.ಆರ್.ಪಾಟೀಲ ವಿವರವಾಗಿ ಘಟನೆಯ ಬಗ್ಗೆ ವಿವರಿಸಿದರು. ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ಮತ್ತೂ ಕಾನೂನು ಹೋರಾಟದ ಬಗ್ಗೆಯೂ ವಿವರವಾಗಿ ತಿಳಿಸಿದರು.