ಮೇಕೆದಾಟು ಅಣೆಕಟ್ಟು ತಮಿಳುನಾಡು ಕಿರಿಕ್: ಕಾಮಗಾರಿಗೆ ಬ್ರೇಕ್
1 min readಮಂಡ್ಯ: ತಮಿಳುನಾಡು ಕಿರಿಕ್ನಿಂದಾಗಿ ಮೇಕೆದಾಟು ಯೋಜನೆ ಪ್ರಸ್ತಾವನೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಮೇಕೆದಾಟು ಯೋಜನೆ ಚರ್ಚೆಯ ಪ್ರಸ್ತಾವನೆಯನ್ನ ನದಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೂಡಿದೆ.
ಯೋಜನೆಗೆ ಒಪ್ಪಿಗೆ ಪಡೆಯಲು ಚರ್ಚೆ ನಡೆಸಬೇಕೆಂಬ ಕರ್ನಾಟಕ ಮನವಿ ಮೇರೆಗೆ ಚರ್ಚೆಗೆ ಮಾರ್ಗಸೂಚಿ ನಿಗದಿಯಾಗಿತ್ತು. ಆದ್ರೆ ತಮಿಳುನಾಡು ಸದಸ್ಯರ ವಿರೋಧದಿಂದಾಗಿ ಪ್ರಸ್ತಾವನೆಯನ್ನೇ ಕೈಬಿಡಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನ ನದಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೂಡಿದೆ.
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ. ಈ ಯೋಜನೆಯ ಮಧ್ಯೆ ಅಜೆಂಡಾ ತರದಂತೆ ಪ್ರಧಾನಿಗೆ ಪತ್ರ ಬರೆದಿದ್ದ ತಮಿಳುನಾಡು ಸರ್ಕಾರ. ತಮಿಳುನಾಡು ಒತ್ತಡದ ಮೇರೆಗೆ ಪ್ರಸ್ತಾವನೆಯನ್ನ ಮುಂದೂಡಿದ ನದಿ ನಿರ್ವಹಣಾ ಪ್ರಾಧಿಕಾರ.