ಮೀಡಿಯಾದವರ ಹೆಸರಲ್ಲಿ ಮರಳು ದಂಧೆಕೋರರ ಹಣ ಲೂಟಿ

ಧಾರವಾಡ: ತಾವು ನಡೆಸುವ ಅಕ್ರಮ ಮರಳು ದಂಧೆಗೆ ಮೀಡಿಯಾದವರಿಗೆ ಹಣ ಕೊಡಬೇಕೆಂದು ಟಿಪ್ಪರ್ ಹಾಗೂ ಲಾರಿ ಮಾಲೀಕರ ಬಳಿ ‘ಅನಧಿಕೃತ ದಂಧೆಕೋರರು’ ಹಣವನ್ನ ಎಬ್ಬಿಸುತ್ತಿದ್ದಾರೆಂದು ಗೊತ್ತಾಗಿದೆ.
ತೌಸೀಫ ಯರಗಟ್ಟಿ ಹಾಗೂ ಪಯಾಜ್ ಬಸ್ತವಾಡ ಎಂಬುವವರೇ ಪ್ರತಿಯೊಂದು ಲಾರಿಯಿಂದಲೂ ಹಣ ಪಡೆಯವ ಪ್ರಯತ್ನಕ್ಕೆ ಇಳಿದಿದ್ದಾರೆಂದು ಗೊತ್ತಾಗಿದ್ದು, ಈ ಬಗ್ಗೆ ಹಲವು ಲಾರಿ ಮಾಲೀಕರು ಹಣ ಕೊಡುವುದಿಲ್ಲ. ಯಾವ ಮೀಡಿಯಾದವರು ಎಂದು ಹೇಳಿ ಎಂದು ಕೇಳಿದ್ದಾರೆಂದು ಗೊತ್ತಾಗಿದೆ.
ಪ್ರಮುಖ ಪತ್ರಿಕೆ ಹಾಗೂ ವ್ಯಕ್ತಿಗಳ ಹೆಸರು ಹೇಳಿ ಹಣ ಕೊಳ್ಳೆ ಹೊಡೆಯುತ್ತಿರುವ ತೌಸೀಫ ಯರಗಟ್ಟಿ ಹಾಗೂ ಪಯಾಜ್ ಬಸ್ತವಾಡ ಎಂಬುವವರೇ, ‘ನಾವೂ ಮುಗಿಸಿಕೊಂಡ್ ಬಂದೇವಿ. ನೀವ್ ನಾಕ್ ಸಾವಿರ ಕೊಡ್ರೀ’ ಎಂದು ಹೇಳುತ್ತಿರುವುದು ಬಹಿರಂಗವಾಗಿದೆ.
ತೌಸೀಫ ಹಾಗೂ ಫಯಾಜ್ ಬಸ್ತವಾಡ ಯಾರಿಗೆ ಹಣವನ್ನ ಕೊಡುತ್ತಿದ್ದಾರೆಂಬುದನ್ನ ಬಹಿರಂಗಪಡಿಸಿಬೇಕಿದೆ. ಯಾವ ಮೀಡಿಯಾದವರು ಅವರ ಜೊತೆ ಮಾತಾಡಿದ್ದಾರೆಂಬುದನ್ನೂ ಬಹಿರಂಗ ಮಾಡಬೇಕಿದೆ.
ಧಾರವಾಡದಲ್ಲಿ ಅಕ್ರಮ ಮರಳು ದಂಧೆಯಲ್ಲಿ ಪಳಗಿರುವ ತೌಸೀಫ ಯರಗಟ್ಟಿ ಹಾಗೂ ಪಯಾಜ್ ಬಸ್ತವಾಡ ನಡೆಸುತ್ತಿರುವ ದಂಧೆಯನ್ನ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಟ್ಟ ಹಾಕಬೇಕಿದೆ. ಇಲ್ಲದಿದ್ದರೇ ಮನೆ ನಿರ್ಮಾಣ ಮಾಡಲು ಮುಂದಾಗುವ ಮಧ್ಯಮ ವರ್ಗಿಗಳ ಬದುಕನ್ನ ಇಂಥವರು ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಫಯಾಜ್ ಬಸ್ತವಾಡ್ ಎಂಬಾತ ಬಾರಾಇಮಾಮ ಗಲ್ಲಿ ಮಸೀದಿಯ ಮುತ್ತುವಲ್ಲಿ ಕೂಡಾ ಆಗಿಯೂ, ಇಂತಹ ಅಕ್ರಮ ದಂಧೆಯಲ್ಲಿ ತೊಡಗಿದ್ದಾನೆ.