ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ನಾಳೆ ಮಾಂಸ ಮಾರಾಟ ಬಂದ್
ಹುಬ್ಬಳ್ಳಿ: ಆಗಸ್ಟ್ 11 ರಂದು ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಧಾಲಯಗಳು ಹಾಗೂ ಎಲ್ಲ ಮಾಂಸ ಮಾರಾಟ ಮಾಡುವ ವ್ಯಾಪಾರಸ್ಥರು ತಮ್ಮ ಮಾಂಸದ ಅಂಗಡಿಗಳನ್ನು ಬಂದು ಮಾಡಲು ಸೂಚಿಸಲಾಗಿದೆ.
ಪ್ರಮುಖವಾದ ಸ್ಥಳಗಲ್ಲಿಯೂ ಸೇರಿದಂತೆ ಯಾವುದೇ ಪ್ರದೇಶದಲ್ಲೂ ಮಾರಾಟ ಮಾಡುವಂತಿಲ್ಲ. ಇದಕ್ಕೆ ವಿರುದ್ಧವಾಗಿ ಯಾರಾದರೂ ಮಾಂಸದ ಅಂಗಡಿಗಳನ್ನು ತೆಗೆದಲ್ಲಿ ಪಾಲಿಕೆಯಿಂದ ಲೈಸನ್ನನ್ನು ರದ್ದುಪಡಿಸಿ ಸರಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.