Posts Slider

Karnataka Voice

Latest Kannada News

ಡಾರ್ಕನೆಟ್ ಮೂಲಕ ಮಾದಕ ದ್ರವ್ಯ- ಮಾಸ್ಟರ್ ಮೈಂಡ್ ಜೊತೆಗೆ ಸಿಕ್ಕಿದ್ದು ಯಾರು ಯಾರೂ ಗೊತ್ತಾ..

1 min read
Spread the love

ಬೆಂಗಳೂರು: ರಾಜ್ಯಾಧ್ಯಂತ ತೀವ್ರ ಚರ್ಚೆಗೆ ಕಾರಾಣವಾಗಿರುವ ಮಾದಕ ದ್ರವ್ಯದ ಪ್ರಕರಣಕ್ಕೆ ಹೊಸದೊಂದು ರೂಪ ಸಿಕ್ಕಿದ್ದು, ಡಾರ್ಕನೆಟ್ ಮೂಲಕ ಮಾದಕ ದ್ರವ್ಯವನ್ನ ತರಿಸಿಕೊಳ್ಳುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಬಂಧನ ಮಾಡುವಲ್ಲಿ ಎನ್ ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಫಾಹೀಮ್‌, ಹಾಶೀರ್, ಎಸ್ ಎಸ್ ಶೆಟ್ಟಿ ಹಾಗೂ ಕೆ ಪ್ರಮೋದ್ ಬಂಧಿತ ಆರೋಪಿಗಳಾಗಿದ್ದಾರೆ. ನೆದರಲ್ಯಾಂಡ್ ನಿಂದ ಮಾದಕ ಗುಳಿಗೆಗಳಾದ ಎಂಡಿಎಂಎ ಗಳನ್ನ ತರಿಸಿ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಮಾರಾಟ ಮಾಡುತ್ತಿದ್ದರೆಂದು ಮಾಹಿತಿ ಸಿಕ್ಕಿದೆ.

ಬಿಟ್ ಕ್ವಾಯಿನ್ ನೀಡಿ ಡಾರ್ಕ್ ನೆಟ್ ಮೂಲಕ  ಡ್ರಗ್ಸ್ ಖರೀದಿ‌ ಮಾಡಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ಫಾರೀನ್ ಪೋಸ್ಟ್ ಅಫೀಸಿಗೆ  ಡ್ರಗ್ಸ್ ಪಾರ್ಸೆಲ್  ಬಂದಿತ್ತು.

ಪಾರ್ಸೆಲ್ ನಲ್ಲಿ 143 ಗ್ರಾಂ ನ 750 ಎಂಡಿಎಂಎ ಮಾತ್ರೆಗಳು ಸಿಕ್ಕಿದ್ದವು. ಪೋಸ್ಟಲ್ ಕವರ್ ಮೇಲೆ ಯಾರಿಂದ ಬಂತು ಅನ್ನೊ ಅಡ್ರೆಸ್ ಇರಲಿಲ್ಲ. ಎನ್ ಸಿ ಬಿ ಅಧಿಕಾರಿಗ ತನಿಖೆ ಕೈಗೊಂಡು‌ ಆರೋಪಿಗಳ ಬಂಧನ ಮಾಡಿದ್ದು, ಡ್ರಗ್ಸ್ ತರಿಸುವ ವೆಬ್ ಸೀರಿಸ್ ನೋಡಿದ್ದ ಮಾಸ್ಟರ್ ಮೈಂಡ್ ಫಾಹಿಮ್ ಡಾರ್ಕನೆಟ್ ನಲ್ಲಿ ಅದನ್ನ ಮಾಡಿ ಮುಗಿಸಿದ್ದ.

ಉಡುಪಿಯ ವಿವಿಧ ಕಾಲೇಜುಗಳಿಗೆ ಡ್ರಗ್ಸ್  ಸರಬರಾಜು ಮಾಡಿಸ್ತಿದ್ದ ಫಹೀಮ್, ಹಿಡಿಯಲು ಎನ್ ಸಿಬಿ ಅಧಿಕಾರಿಗಳು ತಾಂತ್ರಿಕವಾಗಿಯೂ ಸಾಕಷ್ಟು ಕಾರ್ಯವನ್ನ ನಿರ್ವಹಿಸಿದ್ದರು. ಹೀಗಾಗಿಯೇ ಪೆಡ್ಲರಗಳು ಸಿಕ್ಕಿಬಿದ್ದಿದ್ದಾರೆ.

ಅಧಿಕಾರಿಗಳಾದ ಅಮಿತ ಘಾಟವೆ, ವಿವೇಕಕುಮಾರ ಪಾಂಡೆ, ಪ್ರದೀಪಕುಮಾರ ಹಾಗೂ ಸುನೀಲ ಪರೇರಾ ದಾಳಿಯ ನೇತೃತ್ವ ವಹಿಸಿದ್ದರು.


Spread the love

Leave a Reply

Your email address will not be published. Required fields are marked *