ಮೇಯರ ಚುನಾವಣೆಗೆ ಬಿಗ್ ಟ್ವಿಸ್ಟ್: ತಮಾಟಗಾರ ಜೊತೆ ಬಿಜೆಪಿ ಇಬ್ಬರು ಸದಸ್ಯರು…
1 min readಧಾರವಾಡ: ನಾಳೆ ನಡೆಯುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಯೇರಲು ಶತಪ್ರಯತ್ನ ನಡೆಸಿದ್ದು, ಅದರಲ್ಲಿ ಯಶ ಕಂಡಿದ್ದಾರೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಮುಖಂಡ ಇಸ್ಮಾಯಿಲ ತಮಾಟಗಾರ ಜೊತೆಗೆ ಧಾರವಾಡ-71 ಕ್ಷೇತ್ರದ ಓರ್ವ ಹಾಗೂ ಹುಧಾ ಪಶ್ಚಿಮ ಕ್ಷೇತ್ರದ ಸದಸ್ಯರೋರ್ವರು ಸಂಪರ್ಕದಲ್ಲಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡಲಿದ್ದಾರೆಂದು ಗೊತ್ತಾಗಿದೆ.
ಹುಬ್ಬಳ್ಳಿಯ ಸರಸ್ವತಿ ಧೋಂಗಡಿ ಎಂಬ ಸದಸ್ಯೆಯು ಕೂಡಾ ಬಿಜೆಪಿಯಿಂದ ದೂರವುಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಈ ಬಾರಿ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.
ಪಕ್ಷದ ಅಧಿಕಾರಕ್ಕಾಗಿ ಇಸ್ಮಾಯಿಲ ತಮಾಟಗಾರ ಹೆಣೆದಿರುವ ತಂತ್ರ ಸಫಲವಾದರೇ ಖಂಡಿತ ಬಿಜೆಪಿ ಅಧಿಕಾರವನ್ನ ಕಳೆದುಕೊಳ್ಳತ್ತೆ ಎಂಬ ಮಾತಿದೆ.