Posts Slider

Karnataka Voice

Latest Kannada News

ಅಕ್ರಮ ಮಾಡಿದವರಿಗೆ ಬಳ್ಳಾರಿ ಮೇಯರ್ ಹುದ್ದೆ ಕೊಡಬೇಕಾ…!? ದಾಖಲೆ ಸಮೇತ ಪ್ರಶ್ನಿಸುತ್ತಿರುವ ನಿಷ್ಠಾವಂತ ಕಾಂಗ್ರೆಸ್ಸಿಗರು…!!!

1 min read
Spread the love

ಅಕ್ರಮ ಮಾಡಿದವರಿಗೆ ಅಧಿಕಾರ ಕೊಡಬೇಕೆ..? ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆ

ಬಳ್ಳಾರಿ: ನಿಗದಿಯಂತೆ ಇದೇ ದಿನಾಂಕ 21ರಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕಾತಿಗೆ ಚುನಾವಣೆ ನಡೆಯಲಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಹುದ್ದೆಗೆ ಹಲವು ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಇವರ ಪೈಕಿ ಬಳ್ಳಾರಿಯ 18ನೇ ವಾರ್ಡಿನ ಮುಲ್ಲಂಗಿ ನಂದೀಶ್ ಕೂಡ ಒಬ್ಬರು. ಆದರೆ ಈಗಾಗಲೇ ಹಲವು ಭೂಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮುಲ್ಲಂಗಿ ನಂದೀಶ್ ಅವರಿಗೆ ಮೇಯರ್ ಹುದ್ದೆ ನೀಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಕಾಂಗ್ರೆಸ್ಸಿನ ಪ್ರಾಮಾಣಿಕ ಕಾರ್ಯಕರ್ತರಲ್ಲಿ ಮೂಡಿದೆ.

ಈ ಲೇಖನದ ಜೊತೆಗೆ ಷೇರ್ ಮಾಡಲಾಗಿರುವ ದಾಖಲೆಗಳ ಬಳ್ಳಾರಿ ನಗರ TS ನಂಬರ್ 97 ರಲ್ಲಿಯ ಉದ್ಯಾನವನವಾಗಿ ಗುರುತಿಸಿದ್ದ ಸ್ಥಳದ್ದು. ಈ ಸ್ಥಳ ಮಹಾನಗರ ಪಾಲಿಕೆಗೆ ಸೇರಿದ್ದು. ಇದನ್ನು ಈಗ ಪಾಲಿಕೆಯ ಸದಸ್ಯರಾದ ಮುಲ್ಲಂಗಿ ನಂದೀಶ್ ಅವರು ನಕಲಿ ದಾಖಲೆ, ತಿದ್ದುಪಡಿ ಮಾಡಿ 16000 sq F ಇದ್ದದ್ದನ್ನು ಉದ್ಯಾನವನ ಮತ್ತು CA ಸೈಟ್ ಸ್ಥಳದಲ್ಲಿ 5000 sqF ತಮ್ಮ ಹೆಂಡತಿ ಹೆಸರಿಗೆ ಮಾಡಿಕೊಂಡು, ಈಗ ಅದನ್ನು ಮಾರಾಟ ಮಾಡಲು ಹೊಂಚು ಹಾಕಿದ್ದಾರೆ. ಇದರ ಬಗ್ಗೆ ಈಗಾಗಲೇ ಲೋಕಾಯುಕ್ತ ಕೋರ್ಟ್ ನಲ್ಲಿ ಕೇಸ್ ದಾಖಲಾಗಿ ಲೋಕಾಯುಕ್ತ ಕೋರ್ಟ್ ಸಹ ಉದ್ಯಾನವನ ಮಾಡಲು ಪಾಲಿಕೆ, ನಾಗರಾಭಿವೃದ್ಧಿ ಪ್ರಾದಿ ಕಾರಕ್ಕೂ ನಿರ್ದೇಶನ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ನಂದೀಶ್ ಅವರು ಅಧಿಕಾರಿಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಉದ್ಯಾನವನ ಮಾಡಲು ಬಿಡುತ್ತಿಲ್ಲ. ಇವರ ತಂದೆ ಈ ಹಿಂದೆ ಪಾಲಿಕೆಗೆ ಸೇರಿದ ಸುಮಾರು 2 ಎಕರೆಗೂ ಹೆಚ್ಚು ಸ್ಥಳವನ್ನು ಅಕ್ರಮಿಸಿಕೊಂಡಿದ್ದರು. ಅದರ ಬಗ್ಗೆ ಓರ್ವ ಸಾಮಾಜಿಕ ಕಾರ್ಯಕರ್ತರು ಈ ಹಿಂದೆ ಪಾಲಿಕೆ ಆಯುಕ್ತೆಯಾಗಿದ್ದ ಪ್ರೀತಿ ಗೆಹ್ಲೋಟ್ ಮೇಡಂ ಅವರಿಗೆ ದೂರು ಕೊಡಲಾಗಿ ಅದನ್ನು ಸಹ ಮೇಡಂ ಅವರು ಪಾಲಿಕೆಯ ಡಂಪ್ ಯಾರ್ಡ್‌ನ್ನು ತೆರವುಗೊಳಿಸಿ ಪಾಲಿಕೆಗೆ ಹಿಂದಕ್ಕೆ ಪಡೆದಿದ್ದಾರೆ.

ಈಗ ಈ ಅತಿಕ್ರಮಣದ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಅವರಿಗೆ ಪ್ರತಿಯೊಂದು ಮಾಹಿತಿ ಕೊಟ್ಟಿದ್ದಾರೆ. ಅವರು ಸಹ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಈಗ ಇದೇ ಪಾಲಿಕೆ ಸದಸ್ಯ ನಂದೀಶ್ ಅವರು ಪಾಲಿಕೆ ಮೇಯರ್ ಆಗಲು ಪ್ರಯತ್ನ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹವರನ್ನು ಪಾಲಿಕೆ ಮೇಯರ್ ಮಾಡಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಈಗಾಗಲೇ ಪಾರ್ಕ್ ಅತಿಕ್ರಮಣ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಆದುದರಿಂದ ಕಾಂಗ್ರೆಸ್ ಶಾಸಕರು, ಸಚಿವರು, ಸಂಸದರು, ಪಕ್ಷದ ರಾಜ್ಯ ಹೈಕಮಾಂಡ್ ಈ ಬಗ್ಗೆ ಗಮನಹರಿಸಬೇಕು. ಪ್ರಾಮಾಣಿಕ ಆಡಳಿತಕ್ಕೆ ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಯವಿಟ್ಟು ಪಾಲಿಕೆಯ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ನಿರ್ದೇಶನ ಮಾಡಿ ಸರಕಾರದ ಆಸ್ತಿ ಉಳಿಸುವಿರೆಂದು ಕಾರ್ಯರ್ತರು ನಂಬಿದ್ದಾರೆ.

ಮುಲ್ಲಂಗಿ ನಂದೀಶ್ ಗೆ ಮೇಯರ್ ಮಾಡಿದರೆ ನಗರದಲ್ಲಿಯ ಸರಕಾರಿ ಆಸ್ತಿ ಕಬಳಿಸಿ ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುವುದು ಖಚಿತ. ಹಾಗೆ ಆಗಬಾರದು ಎಂಬುದು ಬಳ್ಳಾರಿ ನಗರ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವಾಗಿದೆ.


Spread the love

Leave a Reply

Your email address will not be published. Required fields are marked *

You may have missed