ಶಿಷ್ಟಾಚಾರ ಮರೆತ ಮೇಯರ್ ಅಂಚಟಗೇರಿ- ಮೊಬೈಲ್‌ನಲ್ಲಿ ಮಾತೇ ಮಾತು…!!!?

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ವಾಣಿಜ್ಯನಗರಿಗೆ ಬಂದ ಸಮಯದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಮೇಯರ್ ಈರೇಶ ಅಂಚಟಗೇರಿಯವರು ಶಿಷ್ಟಾಚಾರ ಮರೆತ ಘಟನೆ ನಡೆದಿದೆ.
ಅವಳಿನಗರ ಹೆಮ್ಮೆ ಪಡುವಂತ ಯುವ ಜನೋತ್ಸವ ಉದ್ಘಾಟನೆಗೆ ಪ್ರಧಾನಿ ಆಗಮಿಸುತ್ತಿರುವ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ಹೋಗಬೇಕಾಗಿದ್ದ ಮೇಯರ್ ಈರೇಶ ಅಂಚಟಗೇರಿ ಅವರು, ರೇಲ್ವೆ ಮೈದಾನದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ಕುಳಿತಿದ್ದು ಕಂಡು ಬಂದಿತು.