“ಎಂಎ ವಿದ್ಯಾರ್ಥಿ” ಈರೇಶ ಅಂಚಟಗೇರಿ ಹು-ಧಾ ಮೇಯರ್ ಫಿಕ್ಸ್.. ಧಾರವಾಡಕ್ಕೆ ಸಿಕ್ಕ “ಕಮಲ ಜೋಶಿ ಬಂಟ”…

ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಧಾರವಾಡದ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಆಯ್ಕೆಯಾಗಿದ್ದು, ಅಧಿಕೃತವಾಗಿ ಘೋಷಣೆ ಬಾಕಿಯಿದೆ.

ಮೇಯರ್, ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಇಂದ ಈರೇಶ ಅಂಚಟಗೇರಿ ಉಮಾ ಮುಕುಂದ್ ಅವರಿಂದ ನಾಮಪತ್ರ ಸಲ್ಲಿಕೆ .
ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮೇಯರ್ – ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಈರೇಶ್ ಅಂಚಟಗೇರಿ ಹೆಸರು ಅಂತಿಮಗೊಳಿಸಿದ್ದು, ಮೇಯರ್ ಸ್ಥಾನ ಧಾರವಾಡ ದ ಪಾಲಾಆಗಿದು ಖಚಿತವಾಗಿದೆ. ಉಪ ಮೇಯರ್ ಸ್ಥಾನಕ್ಕೆ ಉಮಾ ಮುಕುಂದ ಫೈನಲ್ ಮಾಡಲಾಗಿದ್ದು, ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ. ಈರೇಶ್ ಅಂಚಟಗೇರಿ ಎರಡನೇ ಬಾರೀ ಗೆದ್ದು ಬಂದಿದ್ದಾರೆ. ಮೊದಲ ಬಾರಿ ಗೆದ್ದ
ಉಮಾ ಮುಕುಂದಗೆ ಉಪ ಮೇಯರ್ ಪಟ್ಟ ಕಟ್ಟಲು ಬಿಜೆಪಿ ಸನ್ನದ್ಧವಾಗಿದೆ. ವಿರೇಶ್ ಅಂಚಟಗೇರಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ತ. ಉಮಾ ಮುಕುಂದ ಸಹ ಕೇಂದ್ರ ಸಚಿವ ಪ್ರಲ್ಹಾದ್ ಕ್ಯಾಂಡಿಡೇಟ್. ಶಾಸಕ ಅಮೃತ ದೇಸಾಯಿ, ಬಿಜೆಪಿ ಪ್ರಮುಖರ ಜೊತೆ ಆಗಮಿಸಿ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ.
ಈರೇಶ ಅಂಚಟಗೇರಿ ಅವರ ಬಗ್ಗೆ ಮಾಹಿತಿ..




ಇದರ ನಡುವೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದ ರಾಜಣ್ಣಾ ಕೊರವಿ ಅವರಿಗೆ ಮೇಯರ್ ಮಾಡಲಾಗುತ್ತೆ ಎಂಬ ಮಾತುಗಳು ಕೇಳಿ ಬಂದಿದ್ದು, ಅವೀಗ ಸುಳ್ಳಾಗಿವೆ.
