Posts Slider

Karnataka Voice

Latest Kannada News

ಹುಬ್ಬಳ್ಳಿಯವರು ಮಾವನೂರಲ್ಲಿ ಕ್ರಿಕೆಟ್ ಬೆಟ್ಟಿಂಗ್: 4ಬಂಧನ- ಸಿಕ್ಕಿದ್ದೇನೇನು ಗೊತ್ತಾ..?

1 min read
Spread the love

ಹುಬ್ಬಳ್ಳಿ: ಶಹರದಿಂದ ಹೋಗಿ ಗ್ರಾಮೀಣ ಪ್ರದೇಶದಲ್ಲೂ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಮೇತ ಹಿಡಿಯುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ರಾಮನಗರದ ಬಸವರಾಜ ಕರಡಿ, ಹುಬ್ಬಳ್ಳಿ ಡಾಕಪ್ಪ ವೃತ್ತದ ರಾಜು ವಿಠ್ಠಲಸಾ ದೋಂಗಡಿ, ಮಾವನೂರ ಗ್ರಾಮದ ವಿರುಪಾಕ್ಷಯ್ಯ ಪಂಚಯ್ಯ ಕೋರಿಯಾನಮಠ ಹಾಗೂ ವೀರಭದ್ರಯ್ಯ ಗುರುಸಿದ್ದಯ್ಯ ಕೋರಿಯಾನಮಠ ಎಂಬುವವರನ್ನ ಬಂಧನ ಮಾಡಲಾಗಿದೆ.

ಬಂಧಿತರಿಂದ 8000 ಸಾವಿರ ನಗದು ಹಾಗೂ ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಮಾವನೂರ ಗ್ರಾಮದ ಬಸವಣ್ಣ ದೇವರ ಸಾರ್ವಜನಿಕ ಜಾಗದಲ್ಲಿ ಬೆಟ್ಟಿಂಗ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದರು.

ವಾಣಿಜ್ಯನಗರಿಯಲ್ಲಿ ನಿರಂತರವಾಗಿ ಸಿಸಿಬಿ ದಾಳಿಗಳು ನಡೆಯುತ್ತಿದ್ದು, ಇದರಿಂದ ಬೆದರಿರುವ ಬುಕ್ಕಿಗಳು ಅಕ್ಕಪಕ್ಕದ ಗ್ರಾಮಗಳಲ್ಲಿ ದಂಧೆಯನ್ನ ಆರಂಭಿಸಿದ್ದು, ಇದೀಗ ಅಲ್ಲಿಯೂ ಪೊಲೀಸರ ದಾಳಿಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ.


Spread the love

Leave a Reply

Your email address will not be published. Required fields are marked *