ಮಾವಾ ತಯಾರಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ: ದೇವರಹಿಪ್ಪರಗಿ ಪೊಲೀಸ ಕಾರ್ಯಾಚರಣೆ

ವಿಜಯಪುರ: ಅಕ್ರಮವಾಗಿ ಮಾವಾ ತಯಾರಿಸುವ ಅಡ್ಡೆಯ ಮೇಲೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಮಾವಾ ಜಪ್ತಿ ಮಾಡಿದ್ದಾರೆ.
19 ಕೆಜಿ ಮಾವಾ, ಮಾವಾ ತಯಾರಿಸಲು ಬಳಸುವ ಕಚ್ಚಾ ವಸ್ತುಗಳಾದ ಅಡಿಕೆ ಚೂರು ತುಂಬಿದ 360 ಕೆಜಿ ಪ್ಲಾಸ್ಚೀಕ್ ಚೀಲಗಳು, 40 ಕೆಜಿ ತಂಬಾಕು ಮಿಶ್ರಿತ ಅಡಿಕೆ ಚೂರುಗಳ ಪಾಕೀಟುಗಳು, 12 ಕೆಜಿ ಸುಣ್ಣ, ಒಂದು ಮಿಕ್ಸರ್ ಸೇರಿ ಒಟ್ಟು 1,61,420 ಮೌಲ್ಯದ ನಾನಾ ವಸ್ತುಗಳು ಪೊಲೀಸರು ಜಪ್ತಿ ಮಾಡಿದ್ದಾರೆ.
ದೇವರಹಿಪ್ಪರಗಿ ಪಟ್ಟಣದ ಮುಬಾರಕ ಮಕ್ಬುಲ್ ಬಾಗವಾನ(28), ಬಬಲು ಊರ್ಫ್ ದಸ್ತಗೀರ್ ಇಸ್ಮಾಯಿಲ್ ದಪೇದಾರ(22) ಬಂಧಿತರು. ಈ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರವಾಲ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.