ಮಟಕಾ ಕೇಸಲ್ಲಿ ಪರಶುರಾಮ ಬಂಧನ
1 min readಹುಬ್ಬಳ್ಳಿ: ಸಾರ್ವಜನಿಕರಿಗೆ ಒಂದು ರೂಪಾಯಿಗೆ ತೊಂಬತ್ತು ರೂಪಾಯಿ ಕೊಡುತ್ತೇನೆಂದು ಆಮಿಷವೊಡ್ಡಿ ಮಟಕಾ ಆಡುತ್ತಿದ್ದ ವ್ಯಕ್ತಿಯನ್ನ ಗುರುಶಿದ್ದೇಶ್ವರನಗರದ ಅಶೋಕ ಕಾಟಗಾರ ಪಾನ್ ಶಾಪ ಮುಂದೆ ಬಂಧನ ಮಾಡುವಲ್ಲಿ ಕಮರಿಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನ ಗುರುಶಿದ್ದೇಶ್ವರನಗರದ ಪರಶುರಾಮ ಕೃಷ್ಣಾಸಾ ಹಬೀಬ ಎಂದು ಗುರುತಿಸಲಾಗಿದ್ದು, ಈತ ಕಿರಾಣಿ ಅಂಗಡಿ ವ್ಯಾಪಾರ ಮಾಡುತ್ತಲೇ ಮಟಕಾ ದಂಧೆಯಲ್ಲಿ ತೊಡಗಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತನಿಂದ 5740 ರೂಪಾಯಿ ನಗದು, ಮಟಕಾ ಚೀಟುಗಳು ಹಾಗೂ ಬರೆದು ಕೊಡುತ್ತಿದ್ದ ಪೆನ್ನನ್ನೂ ವಶಕ್ಕೆ ಪಡೆಯಲಾಗಿದೆ. ಕಮರಿಪೇಟೆ ಠಾಣೆ ಇನ್ಸಪೆಕ್ಟರ್ ಬಸವರಾಜ ಬುದ್ನಿ ನೇತೃತ್ವದಲ್ಲಿ ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟಕಾ ದಂಧೆಯನ್ನ ಹತ್ತಿಕ್ಕಲು ನಿರಂತರವಾಗಿ ರೇಡಗಳನ್ನ ಮಾಡಲಾಗುತ್ತಿದ್ದು, ಯಾರಾದರೂ ಕಂಡರೇ ಮಾಹಿತಿ ನೀಡುವಂತೆಯೂ ಪೊಲೀಸ್ ಇನ್ಸಪೆಕ್ಟರ್ ಕೋರಿದ್ದಾರೆ.