ಯುವಕ ನೀರು ಪಾಲು: ಜಿಲ್ಲಾಡಳಿತವೇ ಕಾರಣ- ಪ್ರಗತಿಪರ ಸಂಘಟನೆಗಳ ಹೋರಾಟ
1 min readರಾಯಚೂರು: ಮಸ್ಕಿಯ ಹಳ್ಳದಲ್ಲಿ ಯುವಕ ಕೊಚ್ಚಿ ಹೋದ ಘಟನೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಮಸ್ಕಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿವೆ.
ವಿಫಲ ರಕ್ಷಣಾ ಕಾರ್ಯಕ್ಕೆ ಮಸ್ಕಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದವರು ಕಾರಣ ಎಂದು ಆರೋಪಿಸಿರುವ ಪ್ರತಿಭಟನಾನಿರತರು ಬೀದರ್ – ಶ್ರೀರಂಗಪಟ್ಟಣ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ನೂರಾರು ಜನರ ಸಮ್ಮುಖದಲ್ಲೇ ರಕ್ಷಣಾ ಸಿಬ್ಬಂದಿಗಳು ಚನ್ನಬಸವ ಎಂಬ ಯುವಕನನ್ನ ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿವೆ. ಇದಕ್ಕೇಲ್ಲ ಅಗ್ನಿಶಾಮಕ ದಳ ಹಾಗೂ ಪೊಲೀಸರೇ ಕಾರಣ ಎಂದು ಹೋರಾಟಗಾರರು ಆರೋಪಿಸಿದರು.
ನುರಿತ ಪರಿಣಿತರು ಹಾಗೂ ವಸ್ತುಗಳಿಲ್ಲದೇ ರಕ್ಷಣೆಯನ್ನ ಹೇಗೆ ಮಾಡುತ್ತೀರಿ. ನೀರಿನಲ್ಲೇ ಆತ ನಿಂತಿದ್ದರೇ ಬದುಕುತ್ತಿದ್ದ. ನಿಮ್ಮ ಸಲಕರಣೆಗಳು ವ್ಯವಸ್ಥಿತವಾಗಿರದೇ ಇರುವುದರಿಂದಲೇ ಚೆನ್ನಬಸವ ನೀರಲ್ಲಿ ಕೊಚ್ಚಿಕೊಂಡು ಹೋಗುವಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.