ಮಸ್ಕಿ ಪ್ರತಾಪಗೌಡ ಟಿಕೆಟ್ ಗೊಂದಲ: ಹುಬ್ಬಳ್ಳಿಯಲ್ಲಿ ಮಹತ್ವದ ಚರ್ಚೆ
1 min readಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿರುವ ರಾಯಚೂರು ಜಿಲ್ಲೆಯ ಮಸ್ತಿ ಮತಕ್ಷೇತ್ರದ ಪ್ರತಾಪಗೌಡ ಪಾಟೀಲ ಬಗ್ಗೆ ಕೆಲವು ಭಿನ್ನಾಬಿಪ್ರಾಯಗಳು ಬಂದಿದ್ದು ಅವುಗಳನ್ನ ಶಮನ ಮಾಡಲು ಮಹತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ನಿನ್ನೆ ತಡರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಸೇರಿದಂತೆ ಬಹುತೇಕ ಪ್ರಮುಖರು ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ್ದರು. ಮಸ್ಕಿಯಲ್ಲಿ ಪ್ರತಾಪಗೌಡ ಅವರಿಗೆ ಟಿಕೆಟ್ ನೀಡಬಾರದೆಂಬ ಮಾತುಗಳು ಕ್ಷೇತ್ರದಲ್ಲಿ ಬರುತ್ತಿವೆ. ಕೆಲವು ನಾಯಕರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆಂಬ ಮಾತುಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.
ಮಸ್ಕಿ ಕ್ಷೇತ್ರದಲ್ಲಿರುವ ಬಿಜೆಪಿ ಮುಖಂಡರ ಬಗ್ಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಸ್ವತಃ ಪ್ರತಾಪಗೌಡ ಪಾಟೀಲ, ರಾಜ್ಯದ ಬಿಜೆಪಿ ಮುಖಂಡರಿಗೆ ವಿವರಣೆ ನೀಡಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುವಂತೆ ನೋಡಿಕೊಳ್ಳಬೇಕೆಂದು ಕೋರಿದರೆಂದು ಹೇಳಲಾಗಿದೆ.
ಪಕ್ಷದ ಹಲವು ಆಂತರಿಕ ವಿಷಯಗಳ ಕುರಿತು ಸಭೆಯಲ್ಲಿ ಹಲವು ಚರ್ಚೆಗಳನ್ನ ಮಾಡಲಾಗಿದೆ. ಬಿಜೆಪಿ ನಳಿನಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮಹಾಂತೇಶ್ ಕವಟಗಿಮಠ, ಆನಂದ ಮಾಮನಿ, ಬಾಲಚಂದ್ರ ಜಾರಕಿಹೋಳಿ, ಸಂಗಣ್ಣ ಕರಡಿ, ಪ್ರತಾಪ್‌ಗೌಡ ಪಾಟೀಲ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.