ಮಾಸ್ಕಲ್ಲೇ ಕುಟುಕಿದ ಮಾಜಿ ಸಚಿವ: ಸೋಂಕಿತ ಸರಕಾರದ ಮಾಸ್ಕ್ ಹಾಕಿದ್ದವರು ಯಾರೂ ಗೊತ್ತಾ..
ಬೆಂಗಳೂರು: ಮಾಜಿ ಸಚಿವ ಪ್ರಿಯಾಂಕಾ ಖರ್ಗೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲು ಹೊಸ ಸ್ವರೂಪವನ್ನ ಕಂಡು ಕೊಂಡಿದ್ದಾರೆ. ಮಾಸ್ಕನಿಂದಲೇ ಸರಕಾರವನ್ನ ಸೋಂಕಿತ ಸರಕಾರ ಎಂದು ಬರೆದುಕೊಂಡು ಗಮನ ಸೆಳೆದಿದ್ದಾರೆ.
ಪ್ರಿಯಾಂಕಾ ಖರ್ಗೆ ಮಾಡಿರುವ ಟ್ವೀಟ್ ಹೀಗಿದೆ ನೋಡಿ..
ಟ್ವಿಟ್ -_1.
ಸೋಂಕಿತ ಸರಕಾರ ಮಾಸ್ಕ್ ಧರಿಸಿ ಗಮನ ಸೆಳೆದ ಕೆಪಿಸಿಸಿ ವಕ್ತಾರರು ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ.
ಸೋಂಕಿತ ಸರಕಾರ ಎಂದು ಬರೆಯಲಾದ ಮಾಸ್ಕ್ ಧರಿಸಿ ಅಧಿವೇಶನದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದ ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅದೇ ಫೋಟೋ ಬಳಸಿ ಟ್ವಿಟ್ ಮಾಡುವ ಮೂಲಕ ಬಿಜೆಪಿ ಸರಕಾರದ ಒಟ್ಟಾರೆ ವೈಫಲ್ಯವನ್ನು ಟೀಕಿಸಿದ್ದಾರೆ.
“ಅಧಿವೇಶನದಲ್ಲಿ ಸಾಕಷ್ಟು ಮಾತನಾಡಲು ಅನುಮತಿ ನಿರಾಕರಿಸಿದ್ದರಿಂದ ವಿರೋಧಪಕ್ಷವಾದ ನಮಗೆ ಈ ರೀತಿ ಮಾಸ್ಕ್ ಧರಿಸಿ ಪ್ರತಿಭಟನೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ಆಡಳಿತ ಪಕ್ಷದವರಿಗೆ ತಲುಪಿಸುವುದೇ ಸರಿಯಾದ ಮಾರ್ಗವಾಗಿದೆ” ಎಂದು ಶ್ರೀ ಪ್ರಿಯಾಂಕ್ ಖರ್ಗೆ ಖಾರವಾಗಿ ಟ್ವಿಟ್ ಮಾಡಿದ್ದಾರೆ.
ಮುಂದುವರೆದ ಅವರು ” ದುರಾದೃಷ್ಟವೆಂದರೆ, ಮಾಸ್ಕ್ ಧರಿಸಿ ಕೊರೋನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಆದರೆ, ಬಿಜೆಪಿ ಸರಕಾರದ ದುರಾಡಳಿತದಿಂದಲ್ಲ” ಎಂದು ಕುಟುಕಿದ್ದಾರೆ.
ಟ್ವಿಟ್ – 2.
ವೈದ್ಯಕೀಯ ಶಿಕ್ಷಣ ಸಚಿವರಿಗೆ ಟ್ವಿಟ್ ಮೂಲಕ ತಿರುಗೇಟು ನೀಡಿದ ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ.
ಕೊರೋನಾ ನಿಯಂತ್ರಣಕ್ಕೆ ಇಂದು ಇಡೀ ಸರಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಸ್ರಾರು ಕೊರೋನಾ ಯೋಧರು ತಮ್ಮ ಜೀವಪಣಕ್ಕಿಟ್ಟು ಅವಿರತ ಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಸುಧಾಕರ್ ಅವರಿಗೆ ಟ್ವಿಟ್ ಮೂಲಕ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು, ನೀವು ತಟ್ಟೆ ಬಡಿಯಲು ಕೇಳಿದ್ದೀರಿ, ನಾವು ಮಾಡಿದೆವು. ನೀವು ದೀಪ ಬೆಳಗಿಸಿ ಎಂದಿರಿ, ನಾವು ಬೆಳಗಿಸಿದೆವು. ನೀವು ಮನೆಯಲ್ಲೇ ಇರಿ ಎಂದಿರಿ, ನಾವು ಇದ್ದೆವು. ನೀವು ಹೊರಗೆ ಬನ್ನಿ ಎಂದಿರಿ, ನಾವು ಬಂದೆವು. ನೀವು ಹೇಳಿದ ಎಲ್ಲವನ್ನೂ ನಾವು ಮಾಡಿದೆವು.
21 ದಿನಗಳಲ್ಲಿ ಈ ಯುದ್ದ ಮುಗಿಯಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ