ಮೂಗಿನಿಂದ ಕೆಳಕ್ಕೀಳಿದ ಮಾಸ್ಕ್-ಪೊಲೀಸರಿಂದ ಹಲ್ಲೆ ಆರೋಪ: ನೂರಾರೂ ಜನರು ಹಳೇಹುಬ್ಬಳ್ಳಿ ಠಾಣೆ ಮುಂದೆ ಜಮಾವಣೆ
1 min readಹುಬ್ಬಳ್ಳಿ: ಮಾಸ್ಕ್ ಹಾಕಿಕೊಂಡರೂ, ಮಾಸ್ಕ್ ಮೂಗಿನಿಂದ ಕೆಳಗೆ ಇಳಿದಿದ್ದರಿಂದ ದಂಡ ಭರಿಸಿಕೊಳ್ಳಬೇಕಾದ ಪೊಲೀಸರು, ಯುವಕನನ್ನ ಹೊಡೆದಿದ್ದಾರೆಂದು ಆರೋಪಿಸಿ, ಸಾರ್ವಜನಿಕರು ಹಳೇಹುಬ್ಬಳ್ಳಿ ಠಾಣೆ ಮುಂದೆ ಜಮಾವಣೆಗೊಂಡ ಘಟನೆ ಇದೀಗ ನಡೆದಿದೆ.
ಹಳೇಹುಬ್ಬಳ್ಳಿ ಪ್ರದೇಶದ ಇಂಡಿಪಂಪ್ ಬಳಿ ಬೈಕಿನಲ್ಲಿ ತನ್ನ ಮನೆಯಿರುವ ಮಂಟೂರ ರಸ್ತೆಗೆ ಹೋಗುತ್ತಿದ್ದ ಇಜಾಜ ದಿವಾನಲಿ ಎಂಬ ಯುವಕನನ್ನ ಪೊಲೀಸರು ಹಿಡಿದು ದಂಡ ಕಟ್ಟುವಂತೆ ಹೇಳಿದ್ದಾರೆ. ಆದರೆ, ಅಷ್ಟರಲ್ಲಿಯೇ ಮಾತಿಗೆ ಮಾತು ಬೆಳೆದು ಒಳಗೆ ಕರೆದುಕೊಂಡು ಹೋಗಲಾಗಿದೆ. ಇದೇ ಘಟನೆ ಗೊಂದಲವನ್ನ ಸೃಷ್ಟಿ ಮಾಡಿದೆ.
ಮಾಸ್ಕ್ ಸರಿಯಾಗಿ ಹಾಕಿಕೊಳ್ಳದೇ ಹೊಡೆಯುವುದಕ್ಕೆ ಯಾರೂ ಅಧಿಕಾರ ಕೊಟ್ಟರೂ, ಆತ ಮಾಡಿದ ತಪ್ಪೇನು ಎಂದು ಪ್ರಶ್ನಿಸುವ ಕೆಲವರು ಹಳೇಹುಬ್ಬಳ್ಳಿ ಠಾಣೆಯ ಮುಂದೆ ಜಮಾವಣೆಗೊಂಡಿದ್ದು, ಪೊಲೀಸರ ಕ್ರಮದ ಬಗ್ಗೆ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಠಾಣೆಗೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಆಗಮಿಸಿದ್ದು, ಆಗಿರುವ ಘಟನೆ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸಿ, ಪರಿಸ್ಥಿತಿಯನ್ನ ಶಾಂತಗೊಳಿಸಿದ್ದಾರೆ.