ಮಾಸ್ಕ್ ಧರಿಸದಿದ್ದಕ್ಕೆ ರಾಜ್ಯದಲ್ಲಿ ಸಂಗ್ರಹವಾದ ದಂಡವೆಷ್ಟು ಗೊತ್ತಾ…!
1 min readಬೆಂಗಳೂರು: ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಧಿಸಿದ ದಂಡವನ್ನ ನೋಡಿದರೇ, ಜನರು ಯಾವಾಗ ಸುಧಾರಣೆ ಕಾಣುವವರೋ ಎಂದು ಬೇಸರ ಮಾಡಿಕೊಳ್ಳುವಂತಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ವಿಧಿಸಲಾಗಿರುವ ದಂಡ 9 ಕೋಟಿ, 46 ಲಕ್ಷ 43ಸಾವಿರದಾ 250 ರೂಪಾಯಿ ಎಂದು ಸರಕಾರವೇ ಮಾಹಿತಿಯನ್ನ ನೀಡಿದೆ.
ಸಂಗ್ರಹವಾಗಿರುವ ದಂಡದಲ್ಲಿ 8 ಕೋಟಿ 90 ಲಕ್ಷ 68 ಸಾವಿರದಾ 197 ರೂಪಾಯಿ ಹಣ ಮಾಸ್ಕ್ ಧರಿಸದೇ ಇರುವುದಕ್ಕೆ ಪಡೆಯಲಾಗಿದೆ. ದೈಹಿಕ ಅಂತರ ಪಾಲನೆ ಮಾಡದೇ ಇರುವುದಕ್ಕೆ 55 ಲಕ್ಷ 65ಸಾವಿರದಾ 60 ರೂಪಾಯಿ ದಂಡ ವಿಧಿಸಲಾಗಿದೆ.
ಮಾಸ್ಕ್ ಹಾಕದ ಕಾರ 325917 ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದೆ ಇರುವುದಕ್ಕಾಗಿ 25073 ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ಕೊರೋನಾ ಎರಡನೇಯ ಅಲೆ ಆರಂಭವಾದ ನಂತರ ಸಾರ್ವಜನಿಕರಿಗೆ ನಿಯಮಗಳನ್ನ ನೀಡಿದರೂ, ಪಾಲನೆ ಮಾಡದೇ ಇಷ್ಟೊಂದು ಪ್ರಮಾಣದ ದಂಡವನ್ನ ತುಂಬಿದ್ದಾರೆ.