“ಮಾಸ್ಕ್” ಡೇ ಆಚರಣೆಗೆ ಮುಂದಾದ ರಾಜ್ಯ ಸರಕಾರ: ನಾಳೆ ಕರುನಾಡಲ್ಲಿ ಮಾಡುವಂತೆ ಆದೇಶ
ಬೆಂಗಳೂರು: ನಾಳೆ ರಾಜ್ಯಾಧ್ಯಂತ ಪಾದಯಾತ್ರೆ ಮಾಡುವ ಮೂಲಕ “ಮಾಸ್ಕ್ ದಿನ”ವನ್ನ ಆಚರಣೆ ಮಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಅದಕ್ಕಾಗಿಯೇ ಕೆಲವೊಂದು ಸೂಚನೆಗಳನ್ನ ನೀಡಿದೆ.
ಮಾಸ್ಕ್ ಡೇ ದಿನ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರುಸುವುದು ಸೇರಿ ಹಲವು ನಿಯಮಗಳ ಪಾಲನೆ. ಜಿಲ್ಲಾ, ತಾಲ್ಲೂಕು, ಪಂಚಾಯತ್ ಮಟ್ಟದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಬಗ್ಗೆ ಜಾಗೃತಿ ಮೂಡಿಸಲು ಕರೆ. ಇದಕ್ಕಾಗಿ 50 ಜನಕ್ಕೆ ಮೀರದಂತೆ ಸೇರಿಕೊಂಡು ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲು ಸೂಚನೆ. ಚುನಾಯಿತ ಪ್ರತಿನಿಧಿಗಳು, ವೈದ್ಯ ಸಿಬ್ಬಂದಿಗಳು ಗಣ್ಯ ವ್ಯಕ್ತಿಗಳ ಜೊತೆ ಜಾಗೃತಿ ಮೂಡಿಸಲು ಸೂಚನೆಯನ್ನ ನೀಡಿ ಆದೇಶ ಹೊರಡಿಸಲಾಗಿದೆ.