ವಯಸ್ಸು 21, ಮದುವೆ ನಡೆದದ್ದು 10 ದಿನದ ಹಿಂದೆ: ಇವತ್ತಾಕೆ ಇನ್ನಿಲ್ಲವಾದಳು.. ಕಿಮ್ಸನಲ್ಲಿ ಕಣ್ಣೀರಧಾರೆ

ಹುಬ್ಬಳ್ಳಿ: 21 ವಯಸ್ಸಿನ ಯುವತಿಯೋರ್ವಳನ್ನ ಕಳೆದ ಹತ್ತೆ ದಿನದ ಹಿಂದೆ ಮದುವೆ ಮಾಡಿಕೊಟ್ಟು ಅದೇ ಸಂಭ್ರಮದಲ್ಲಿದ್ದ ಮನೆಯವರಿಗಿಂದ ಬರಸಿಡಿಲು ಬಡಿದಿದ್ದು, ಯುವತಿ ಕಿಮ್ಸನಲ್ಲಿ ಸಾವಿಗೀಡಾಗಿದ್ದು, ಈ ಸಾವಿಗೆ ಸಂಶಯವ್ಯಕ್ತಪಡಿಸಿರುವ ಕುಟುಂಬ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದೆ.
ಅನುಮಾನಾಸ್ಪದಕವಾಗಿ ಸಾವನಪ್ಪಿದ ಘಟನೆ ನಡೆದ ಹಿನ್ನೆಲೆಯಲ್ಲಿ ಯುವತಿಯನ್ನು ಪೊಲೀಸರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹಾವೇರಿಯ ಯಲಗಚ್ಚಿ ಗ್ರಾಮದ ಜಯಶ್ರೀ ಎಂಬ ಯುವತಿಯ ಮದುವೆಯಾಗಿ ಕೇವಲ ಹತ್ತು ದಿನಗಳಾಗಿತ್ತು. ಸಡನ್ನಾಗಿ ಇಂದು ಆರೋಗ್ಯದಲ್ಲಿ ಏರುಪೇರಾದ, ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪೋಷಕರು ನವ ವಿವಾಹಿತೆಯ ಸಾವಿನ ಬಗ್ಗೇ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ವಿವಾಹಿತೆಯ ಶವವನ್ನು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ಶವವನ್ನು ಹಸ್ತಾಂತರ ಮಾಡಲಾಯಿತು.
ಕಳೆದ ಹತ್ತು ದಿನಗಳ ಹಿಂದಷ್ಟೇ ಮದುವಣಿಗಿತ್ತಿಯಾಗಿದ್ದ ಯುವತಿ ಇನ್ನಿಲ್ಲವಾಗಿರುವುದು ಕುಟುಂಬದಲ್ಲಿ ಅತೀವ ಬೇಸರ ಮೂಡಿಸಿದ್ದು, ಕಿಮ್ಸನ ಮುಂಭಾಗದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.
ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತನಿಖೆಯನ್ನ ಪೊಲೀಸರು ಮುಂದುವರೆಸಲಿದ್ದಾರೆ.