ಚಿಕ್ಕಮಂಗಳೂರು: ತಾಳಿಯ ಕಟ್ಟುವ ಜೊತೆಗೆ ನಿನ್ನ ಜೊತೆ ಏಳು ಜನ್ಮಕ್ಕೂ ನಾನೇ ಜೊತೆಗಿರುತ್ತೇನೆ ಎಂದು ಹೇಳಿ ಇನ್ನೂ ಕೆಲವೇ ನಿಮಿಷಗಳು ಕಳೆದಿರಲಿಲ್ಲ, ಅಷ್ಟರಲ್ಲೇ ವರ ಆಕೆಯನ್ನ ಮಂಟಪದಲ್ಲಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.
https://www.youtube.com/watch?v=uaoOm5n_5vY
ರಾಜ್ಯದಲ್ಲಿ ಕೊರೋನಾ ಸೊಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೋನಾ ಸೋಂಕು ತಡೆಯಲು ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಕೊರೋನಾ ಸೋಂಕು ಕಡಿಮೆಯಾಗುತ್ತಿಲ್ಲ. ಜನರ ಸಹಕಾರ ಇಲ್ಲದೆ ಕೊರೋನ ಸೋಂಕು ಕಡಿಮೆಯಾಗುವುದು ಅಸಾಧ್ಯ. ರಾಜ್ಯದಲ್ಲಿ ಮದುವೆ ಮುಂಜಿಗಳಿಗೆ ಸರ್ಕಾರ ನಿಬಂಧನೆಗಳನ್ನು ವಿಧಿಸಿದ್ದರೂ ಮದುವೆ ಮುಂತಾದ ಕಾರ್ಯಕ್ರಮಗಳು ಇನ್ನೂ ನಡೆಯುತ್ತಲೇ ಇದೆ. ಅಂತಹಾ ಮದುವೆ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು ಇಂದು ರೇಡ್ ನಡೆಸಿದಾಗ ವಧುವನ್ನು ಸ್ಥಳದಲ್ಲೇ ಬಿಟ್ಟು ವರ ಪರಾರಿಯಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಹಳ್ಳಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತದಿಂದ ಪರ್ಮಿಷನ್ ಪಡೆಯಲಾಗಿತ್ತು. ಪರ್ಮಿಷನ್ ಪಡೆಯುವ ವೇಳೆ ಕೇವಲ 10 ಜನರನ್ನು ಸೇರಿಸಿ ವಿವಾಹ ಕಾರ್ಯಕ್ರಮ ನಡೆಸುವುದಾಗಿ ಹೇಳಿದ್ದರು. ಆದ್ರೆ ನಡೆದಿದ್ದೇ ಬೇರೆ. ವಿವಾಹ ಕಾರ್ಯಕ್ರಮದಲ್ಲಿ ಸುಮಾರು 300 ರಿಂದ 400 ಜನರು ಸೇರಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮ ಪಂಚಾಯತ್ ಅಧಿಕಾರಿಗಳು ಮದುವೆ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಮದುವೆ, ವಧು ಎಲ್ಲರನ್ನು ಬಿಟ್ಟ ವರ ಎಸ್ಕೇಪ್ ಆಗಿದ್ದಾನೆ. ಇಷ್ಟು ಮಾತ್ರವಲ್ಲ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿಗಳೂ ಭರ್ಜರಿ ಭೋಜನವನ್ನೂ ಸವಿಯದೇ ಎದ್ನೋ ಬಿದ್ನೋ ಎಂದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಏನೇನೂ ನಡೀತು ನೀವೇ ನೋಡಿ ಬಿಡಿ..