Posts Slider

Karnataka Voice

Latest Kannada News

ಮರೇವಾಡದಲ್ಲಿ “ವಿಶ್ವ ಛಾಯಾಗ್ರಾಹಕರ” ದಿನಾಚರಣೆ- ಹಲವರಿಗೆ ಗೌರವ…

Spread the love

ಧಾರವಾಡ ಫೋಟೊ ಮತ್ತು ವಿಡಿಯೊಗ್ರಾಫರ್ಸ ಸಂಘದ ವತಿಯಿಂದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ

ಧಾರವಾಡ: ಧಾರವಾಡದ ಛಾಯಾಗ್ರಾಹಕರ ಹಿತಾಸಕ್ತಿಗಾಗಿ ಸತತ 16 ವರ್ಷಗಳಿಂದ ಶ್ರಮಿಸುತ್ತ ಬಂದಿರುವ ಧಾರವಾಡ ಫೋಟೊ ಮತ್ತು ವಿಡಿಯೊಗ್ರಾಫರ್ ಸಂಘದ ವತಿಯಿಂದ ಆಗಷ್ಟ 18 ವಿಶಿಷ್ಟವಾಗಿ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ತಾಲೂಕಾ ಮಟ್ಟದ ಕಾಯ೯ಕ್ರಮ ಮರೇವಾಡದಲ್ಲಿ ಆಯೋಜಿಸಲಾಗಿತ್ತು.

ಶ್ರೀ ಪ ಪೊ. ಬಸವಾನಂದ ಮಹಾಸ್ವಾಮಿಗಳು ಇವರಿಂದ ಉದ್ಘಾಟನೆಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮಕ್ಕೆ ಶ್ರೀ ಪ.ಪೂ. ಶಿವಾನಂದ ಸರಸ್ವತಿ ಸ್ವಾಮಿಜಿ ಕವಲಗೇರಿ, ಶ್ರೀ ಪ.ಪೂ. ಪ್ರಶಾಂತದೇವರು ಶ್ರೀ ಗುರು ಮಡಿವಾಳೇಶ್ವರ ಕಲ್ಮಠ, ಗರಗ, ಹಾಗೂ ಶ್ರೀ ಪ.ಪೂ. ಸಂಗಮೇಶ ಮಹಾಸ್ವಾಮಿಗಳು ಧರ್ಮಾಧಿಕಾರಿಗಳು ಮಳೆಪ್ಪಜ್ಜನ ಮಠ, ನರೇಂದ್ರ ರವರ ದಿವ್ಯ ಸಾನ್ನಿಧ್ಯದಲ್ಲಿ ನೇರವೇರಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಶಶಿ ಪಾಟೀಲ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಧಾರವಾಡ ಪೋಟೊ ಮತ್ತು ವಿಡೀಯೊಗ್ರಾಫರ ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಅಜೀವ ಸದಸ್ಯರು, ಸಲಹಾ ಸಮಿತಿಯ ಸದ್ಯಸರು ಮತ್ತು ಸುತ್ತಮುತ್ತ ತಾಲೂಕ ಸಂಘಧ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಹಲವು ಛಾಯಾಗ್ರಾಹಕರಿಗೆ ಧಾರವಾಡ ಛಾಯಾರತ್ನ ಪ್ರಶಸ್ತಿಯನ್ನ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ, ಧರ್ಮದ ಗುರುಗಳಿಗೆ ಸನ್ಮಾನಿಸಲಾಯಿತು.


Spread the love

Leave a Reply

Your email address will not be published. Required fields are marked *